Breaking News

ಸಪ್ತಸಾಗರ ಪ್ರೌಢಶಾಲೆ ವಿದ್ಯಾರ್ಥಿಗಳ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Spread the love

ಸಪ್ತಸಾಗರ ಪ್ರೌಢಶಾಲೆ ವಿದ್ಯಾರ್ಥಿಗಳ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಥಣಿ: ಶಾಲಾ ಶಿಕ್ಷಣ ಇಲಾಖೆಯ 2025-26ನೇ ಶೈಕ್ಷಣಿಕ ವರ್ಷದ ಅಥಣಿ ತಾಲೂಕು ಮಟ್ಟದ ಪ್ರೌಢಶಾಲೆಗಳ ಗಂಡು ಮಕ್ಕಳ ಕಬಡ್ಡಿ ಕ್ರೀಡಾಕೂಟ ಸರಕಾರಿ ಪ್ರೌಢಶಾಲೆ, ತಾಂವಶಿ ಗ್ರಾಮದಲ್ಲಿ ಜರುಗಿದವು.

ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ 24 ಕ್ಲಸ್ಟರಗಳ ತಂಡಗಳು ಭಾಗವಹಿಸಿದ್ದವು. ದರೂರ ಕ್ಲಸ್ಟರದಿಂದ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ಸಪ್ತಸಾಗರ ಪ್ರೌಢಶಾಲೆಯ ಗಂಡು ಮಕ್ಕಳ ಕಬಡ್ಡಿ ತಂಡವು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಸಪ್ತಸಾಗರ ಗ್ರಾಮಕ್ಕೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಅಥಣಿ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಾಥಮಿಕ ಶಾಲಾ ವಿಭಾಗದ ಗಂಡು ಮಕ್ಕಳ ಪಂದ್ಯಾವಳಿಗಳಲ್ಲಿ ಶಾರದಾ ಶಾಲೆ ಗಂಡು ಮಕ್ಕಳು ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿ ಅಥಣಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಕಾರ್ತಿಕ ದರೂರ, ಮೈಬೂಬ ಹುಕ್ಕೇರಿ, ಝೋಹಿರ ಅವಟಿ, ಸೂಫಿಯಾನ ಅವಟಿ ಹಾಗೂ ಯಾಸೀನ ಜಮಾದಾರ ಇವರೆಲ್ಲರೂ ಪ್ರಾಥಮಿಕ ಶಾಲಾ ವಿಭಾಗದ ಗಂಡು ಮಕ್ಕಳ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ದೈಹಿಕ ಶಿಕ್ಷಕರಾದ ಪ್ರಶಾಂತ ಹಳ್ಳೂರ ಕ್ರೀಡಾ ಪಟುಗಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಿದ್ದು ಶಿಕ್ಷಕರಾದ ಮಹಮ್ಮದ ನದಾಫ ತಂಡದ ವ್ಯವಸ್ಥಾಪಕರಾಗಿದ್ದರು. ನಿಸಾರಅಹ್ಮದ ನದಾಫ ತಂಡದ ಮಾರ್ಗದರ್ಶಕರಾಗಿದ್ದರು.

ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾಲೆಗೆ ಹಾಗೂ ಸಪ್ತಸಾಗರ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಹಾಗೂ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ, ಮಾರ್ಗದರ್ಶಕರಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಸಂಸ್ಥೆಯ ಸಂಸ್ಥಾಪಕರಾದ ಡಿ.ಬಿ.ನದಾಫ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಮುಕುಂದ ತೀರ್ಥ ಹಾಗೂ ಎಲ್ಲ ಪಾಲಕರು, ಶಾರದಾ ಶಾಲೆಯ ಹಿರಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷರಾದ ಮಲ್ಲೇಶ ಮೊರೆ ಹಾಗೂ ಎಲ್ಲ ಸದಸ್ಯರು ಮತ್ತು ಎಲ್ಲ ಗ್ರಾಮಸ್ಥರು, ಶಿಕ್ಷಕ-ಶಿಕ್ಷಕಿಯರು ಹೃತ್ಪೂರ್ವಕ ಅಭಿನಂದನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.


Spread the love

About Fast9 News

Check Also

ನಿಜವಾದ ಫಲಾನುಭವಿಗಳನ್ನು ಗುರುತಿಸಿ ನ್ಯಾಯ ಒದಗಿಸಬೇಕು. ಸಮೀಕ್ಷಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಕೊಳ್ಳಬೇಕು.: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveನಿಜವಾದ ಫಲಾನುಭವಿಗಳನ್ನು ಗುರುತಿಸಿ ನ್ಯಾಯ ಒದಗಿಸಬೇಕು. ಸಮೀಕ್ಷಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಕೊಳ್ಳಬೇಕು.: ಶಾಸಕ ಬಾಲಚಂದ್ರ ಜಾರಕಿಹೋಳಿ   …

Leave a Reply

Your email address will not be published. Required fields are marked *