ಗುರುವಿನ ಸ್ಥಾನ ಎಲ್ಲಕ್ಕಿಂತಲೂ ಮಿಗಿಲಾದಿದ್ದು-ಪಾಟೀಲ.
ಘಟಪ್ರಭಾ: ಗುರುವಿನ ಸ್ಥಾನ ಎಲ್ಲಕ್ಕಿಂತಲೂ ಮಿಗಿಲಾದಿದ್ದು ಎಂದು ಸಿಆರ್‌ಪಿ ಸುಭಾಸ ಪಾಟೀಲ ಹೇಳಿದರು
ಅವರು ಗುರುವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ವತಿಯಿಂದ ಹಮ್ಮಿಕೊಂಡ “ತಾಲೂಕಾ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದ ಗುರುಗಳನ್ನು ದೇವರ ರೂಪದಲ್ಲಿ ಪೂಜಿಸುತ್ತ ಬಂದಿರುವುದು ಮತ್ತು ಶ್ರೇಷ್ಠ ಗುರು ಪರಂಪರೆ ಹೊಂದಿರುವ ದೇಶ ಭಾರತ. ಶಿಕ್ಷಕರು ಉತ್ತಮ ಸೇವೆ ಸಲ್ಲಿಸಿ ಎಲ್ಲರಿಗೂ ಮಾದರಿಯಾಗಬೇಕು. ಎಂದರು.
ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಎಂ.ವೈ.ಹಣಮಂತಗೋಳ, ಎಂ.ಕೆ.ಶಿರಗೂರ, ಎಸ್.ಎಸ್.ದೊಡಮನಿ,ಆಯಿಶಾ ಮಕಾನದಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರೂಪಾ ಕಂಬಾರ, ವಿಠ್ಠಲ ಕರೋಶಿ, ಎಸ್‌ಡಿಎಂಸಿ ಅಧ್ಯಕ್ಷರುಗಳಾದ ದಯಾನಂದ ಕಳಸನ್ನವರ, ಶ್ರೀಧರ ಕಂಬಾರ, ಅಯೂಬ ಅತ್ತಾರ, ಬಸವರಾಜ ಗೋಕಾಕ, ಡಿ.ಕೆ. ಜಮಾದಾರ, ಎಸ್.ಡಿ.ಹಂಚಿನಾಳ, ಕೆ.ಟಿ..ಪಾಟೀಲ, ಎಂ.ಆರ್.ಕಡಕೋಳ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರೀಯಾ ಬಂಬಲಾಡಿ ಸ್ವಾಗತಿಸಿ,ನಿರೂಪಿಸಿದರು. ಶಿಕ್ಷಕ ಆರ್.ಎಚ್.ತುಳಸಿಗೇರಿ ವಂದಿಸಿದರು.
ವರದಿ: ವಿಠ್ಠಲ ಕರೊಶಿ