ಬೀದಿ ವ್ಯಾಪಾರಸ್ಥರು ಲೋಕ ಕಲ್ಯಾಣ ಮೇಳದ ಸದುಪಯೋಗ ಪಡೆದುಕೊಳ್ಳಬೇಕು : ಶಿವಾನಂದ ಹಿರೇಮಠ.

ಗೋಕಾಕ : ಬೀದಿ ವ್ಯಾಪಾರಸ್ಥರು ತಮ್ಮ ಉತ್ತಮ ಜೀವನಕ್ಕಾಗಿ ಹಾಗೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರಕಾರ ಬೀದಿ ವ್ಯಾಪಾರಸ್ಥರಿಗಾಗಿಯೆ ಆಯೋಜಿಸಿದ ಲೋಕ ಕಲ್ಯಾಣ ಮೇಳದಲ್ಲಿ ಬಾಗಿಯಾಗಿ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರು ಬೀದಿ ವ್ಯಾಪಾರಸ್ಥರಿಗೆ ಮನವಿ ಮಾಡಿಕೊಂಡರು.
ಕೊಣ್ಣೂರಲ್ಲಿ ಕೌಶಲ್ಯಾಬಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ.ಜಿಲ್ಲಾ ನಗರಾಭಿವೃದ್ಧಿ ಕೋಶ ಬೆಳಗಾವಿ,ಇವರು ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ ಯೋಜನೆಯಲ್ಲಿ ಬೀದಿ ವ್ಯಾಪಾರಸ್ಥರುಗಳಿಗಾಗಿ ದಿ: 17/9/2025 ರಿಂದ 2/10/2025 ರ ವರೆಗೆ 16 ದಿನಗಳ ವರೆಗೆ ಆಯೋಜಿಸಿದ್ದ ಲೊಕ ಕಲ್ಯಾಣ ಮೇಳದಲ್ಲಿ ಪುರಸಭೆಯವರು ಹಾಕಿದ ಎರಡನೆಯ ಹಂತದ ಸಾಲದ ಮಂಜೂರಾತಿ ಆದೇಶ ನೀಡಿ ಬೀದಿ ವ್ಯಾಪಾರಸ್ಥರಿಗೆ ಮಾತನಾಡಿದರು.
ಪುರಸಭೆಯಲ್ಲಿ ಆಯ್ಕೆಯಾದ ಪಲಾನುಭವಿಗಳ ಅರ್ಜಿಗಳನ್ನು ಹಾಕಿ ಬ್ಯಾಂಕ್ ಗಳಿಗೆ ಸಲ್ಲಿಸಲಾಗುತ್ತದೆ ಮತ್ತು ಸುರಕ್ಷಾ ಭೀಮಾ ಯೋಜನೆಗಳಿಗೆ ಸದರಿ ಫಲಾನುಭವಿಗಳನ್ನು ಒಳಪಡಿಸಲಾಗುತ್ತದೆ.
ಬೀದಿ ವ್ಯಾಪಾರಸ್ಥರನ್ನು ಸಾಮಾಜಿಕ ಸೇವೆಗೆ ಒಳಪಡಿಸುವುದು, ಬೀದಿ ವ್ಯಾಪಾರಸ್ಥರಿಗೆ ಡಿಜಿಟಲ್ ವ್ಯವಹಾರಕ್ಕೆ ಪ್ರೇರಪಣೆ ನೀಡಿವುದು ಮುಖ್ಯವಾಗಿ ವಿದ್ಯಾಬ್ಯಾಸ ಮಾಡುತ್ತಿರುವ ಬೀದಿ ವ್ಯಾಪಾರಸ್ಥರ ಮಕ್ಕಳಿಗೆ ಕೇಂದ್ರ ಸರಕಾರದ ಶಿಷ್ಯವೇತನ ಕೊಡಿಸುವುದು ಈ ಲೋಕ ಕಲ್ಯಾಣ ಮೇಳಕದ ಉದ್ದೇಶವಾಗಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಅದರ ಜೊತೆಯಲ್ಲಿ ಬೀದಿ ವ್ಯಾಪಾರಸ್ಥರು,ಮೊದಲು ಪುರಸಭೆವತಿಯಿಂದ ಪರವಾಣಿಗೆ ಪಡೆಯಬೇಕು ಅದರ ಜೊತೆಯಲ್ಲಿ ನಗರದಲ್ಲಿ ಸ್ವಚ್ಛ ಹಾಗೂ ಉತ್ತಮವಾದ ವಸ್ತುಗಳನ್ನು ಮಾರಾಟ ಮಾಡಬೇಕು. ಸಾರ್ವಜನಿಕರಿಗೆ, ಸಾರಿಗೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ತಮ್ಮ ವ್ಯಾಪಾರ ಮಾಡಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಮುದಾಯ ಸಂಘಟಕರಾದ ಮಲ್ಲಪ್ಪ ಪೆದನ್ನವರ,ಕಂದಾಯ ಅಧಿಕಾರಿ ರಮೇಶ ಸೊನ್ನದ , ಸಮುದಾಯ ಸಂಪನ್ಮೂಲ ವ್ಯಕ್ತಿ ದೀಪಾ ಡೊನಗ, ಸಿಬ್ಬಂದಿಗಳು ಹಾಗೂ ಪಲಾನುಭಿಗಳು ಉಪಸ್ಥಿತರಿದ್ದರು.