Breaking News

ಬೈಯುವುದನ್ನು ಬಿಟ್ಟು ರೈತರ ಸೇವೆಗೆ ಮುಂದಾಗಿ ಕೆಲಸ ಮಾಡುವಂತೆ ವಿರೋದಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಲಹೆ

Spread the love

  1. ಬೈಯುವುದನ್ನು ಬಿಟ್ಟು ರೈತರ ಸೇವೆಗೆ ಮುಂದಾಗಿ ಕೆಲಸ ಮಾಡುವಂತೆ ವಿರೋದಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಲಹೆ

*ಹುಕ್ಕೇರಿ-* ನಾವು ನಮ್ಮ ಲೆಕ್ಕವನ್ನು ತೋರಿಸಲು ಸಿದ್ಧರಿದ್ದೇವೆ. ನೀವೂ ಕೂಡ ಲೆಕ್ಕವನ್ನು ನೀಡಲು ಸಿದ್ಧರಿರಬೇಕು.‌ ಈ ಚುನಾವಣೆಯೊಳಗೆ ಅಥವಾ ಚುನಾವಣೆ ಮುಗಿದ ಬಳಿಕ ನಾವುಗಳು ಮಾಡಿರುವ ಸಹಕಾರಿ ಸಂಸ್ಥೆಗಳ ಖರ್ಚು- ವೆಚ್ಚಗಳ ಕುರಿತು ಲೆಕ್ಕಪತ್ರ ನೀಡಲು ಯಾವಾಗ ಬೇಕಾದರೂ ನೀಡುತ್ತೇವೆ. ನೀವೂಗಳು ಸಹ ಲೆಕ್ಕಗಳನ್ನು ಸಾರ್ವಜನಿಕರ ಬಳಿ ಮುಂದಿಡುವಂತೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿರೋಧಿಗಳಿಗೆ ಸವಾಲು ಹಾಕಿದರು.
ಗುರುವಾರದಂದು ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಪ್ರಚಾರ ನಿಮಿತ್ತ ಬೆಲ್ಲದ ಬಾಗೇವಾಡಿ- ಎಲೆಮುನೋಳಿ ಜಿ.ಪಂ.ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸೇವೆಗೆ ಮೀಸಲಿಡುವ ಬದಲು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವುದಕ್ಕೆ ಅವರು ಅಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿರೋಧಿಗಳು ಈಗ ನಮ್ಮ ಸಹಕಾರ ಸಂಘಕ್ಕೆ ಒಳಪಡುವ ಸಹಕಾರ ಸಂಸ್ಥೆಗಳ ಲೆಕ್ಕವನ್ನು ಕೇಳುತ್ತಿದ್ದಾರೆ. ನಮ್ಮ ನೇತೃತ್ವದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 30 ವರ್ಷಗಳ ಅವಧಿಯ ಒಂದೊಂದು ರೂಪಾಯಿಯ ಲೆಕ್ಕವನ್ನು ನೀಡುತ್ತೇವೆ. ನೀವು ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ, 10 ವರ್ಷಗಳ ಬಿಡಿಸಿಸಿ ಬ್ಯಾಂಕಿನ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದಿಡಬೇಕು.‌ನೀವು ಯಾವಾಗ ಹೇಳುತ್ತೀರೋ? ಅವಾಗ ಯಾವುದೇ ಸಮಯದಲ್ಲಿಯೂ ನಮ್ಮ ಕಾರ್ಖಾನೆಗಳ ಲೆಕ್ಕವನ್ನು ಕೊಡುತ್ತೇವೆ. ಇದಕ್ಕೆ ನೀವು ಸಿದ್ಧರಿರಬೇಕು.‌ ಕೇವಲ ಭಾಷಣ ಮಾಡಿದರೆ ಸಾಲದು. ಸಾರ್ವಜನಿಕ ಜೀವನದಲ್ಲಿರುವ ನಾವುಗಳು ಜನರಿಗೆ ಮೋಸವನ್ನು ಮಾಡಬಾರದು. ಅದರಲ್ಲೂ ರೈತರಿಗೆ ಮೋಸವನ್ನು ಮಾಡಿದರೆ ಯಾರಿಗೂ ಉಳಿಗಾಲವಿಲ್ಲ. ನಮ್ಮ ಸವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಎದರಿಸುವಂತೆಯೂ ವಿರೋಧಿಗಳಿಗೆ ಬಾಲಚಂದ್ರ ಜಾರಕಿಹೊಳಿಯವರು ವಿರೋಧಿ ತಂಡಕ್ಕೆ ಸವಾಲು ಹಾಕಿದರು.
ಕಳೆದ 10 ವರ್ಷಗಳಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಿದ್ದಾಗ ಲೆಕ್ಕವನ್ನು ಕೇಳದ ನೀವುಗಳು, ಈಗ ನಿಮಗೆ ನಾವು ಬೇಡವಾದಾಗ ಲೆಕ್ಕವನ್ನು ಕೇಳುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ನಮ್ಮೊಂದಿಗಿದ್ದಾಗ ಆಗಲೇ ಇಂತಹ ಲೆಕ್ಕಗಳನ್ನು ಕೇಳಿದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಇನ್ನೂ ಕಾಲ ಮಿಂಚಿಲ್ಲ. ಅದಕ್ಕೆನೇ ನಾವೂ ಬರ್ತೀವಿ. ನೀವೂ ಬನ್ನಿ. ಎಲ್ಲಿ? ಯಾವ ಸ್ಥಳದಲ್ಲಿ ನಾವಿಬ್ಬರೂ ಸೇರಿ ಲೆಕ್ಕವನ್ನು ಮಾಡೋಣ. ತಪ್ಪುಗಳು ಯಾರದೇ ಇದ್ದರೂ ಅಂತಹವರು ಸಾರ್ವಜನಿಕರು ನೀಡುವ ಶಿಕ್ಷೆಗೆ ಬದ್ಧರಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸರ್ಕಾರಿ- ಸಹಕಾರಿ ವಲಯಗಳ ಲೆಕ್ಕಗಳನ್ನು ಕೇಳುವ ಹಕ್ಕು ಇದ್ದೆರ ಇರುತ್ತದೆ. ಇದನ್ನು ಪ್ರಶ್ನೆ ಮಾಡುವ ಹಕ್ಕು ನಮಗಿಲ್ಲ. ನಮ್ಮ ಸೇವಾವಧಿಯಲ್ಲಿ ನಡೆದಿರುವ ಒಂದೊಂದು ರೂಪಾಯಿ ಲೆಕ್ಕವನ್ನು ನೀಡಲು ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ವಿರೋಧಿಗಳನ್ನು ಕುಟುಕಿದರು.
ಸೆ.28 ರಂದು ನಡೆಯುವ ವಿದ್ಯುತ್ ಸಂಘದ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಒಟ್ಟು 15 ಮತಗಳನ್ನು ಹಾಕಬೇಕು. ಸಾಮಾನ್ಯ ಕ್ಷೇತ್ರದಿಂದ 9 ಮತ, ಮಹಿಳಾ ಕ್ಷೇತ್ರಕ್ಕೆ 2 ಮತ, ಹಿಂದುಳಿದ ವರ್ಗ ‘ಅ’ ಮೀಸಲು ಕ್ಷೇತ್ರಕ್ಕೆ 1 ಮತ, ಹಿಂದುಳಿದ ‘ಬ’ ಕ್ಷೇತ್ರಕ್ಕೆ 1 ಮತ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ 1 ಮತ ಮತ್ತು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ 1 ಮತವನ್ನು ನಮ್ಮ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ಗೆ ಹಾಕಿ ನಮ್ಮ ಎಲ್ಲ ಅಭ್ಯರ್ಥಿಗಳನ್ನು ಬಹುಮತದಿಂದ ಆರಿಸಿ ತರುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಮತದಾನದ ದಿನದಂದು ಯಾರ ಭಯವಿಲ್ಲದೇ ಮುಕ್ತವಾಗಿ ಬಂದು ಮತದಾನ ಮಾಡಬೇಕು.
ಹುಕ್ಕೇರಿ ಭಾಗದಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರು ರೈತರ ಒಳತಿಗಾಗಿ ಎರಡು ಮುಖ್ಯವಾಗಿರುವ ಸಹಕಾರಿ ಸಂಘ- ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಮತ್ತು ಹುಕ್ಕೇರಿ ವಿದ್ಯುತ್ ಸಂಘವನ್ನು ಉಳಿಸಿಕೊಂಡು ಬೆಳೆಸಬೇಕಾದುದ್ದು ನಮ್ಮಗಳ ಕರ್ತವ್ಯವಾಗಿದೆ. ಈ ಮೂಲಕ ರೈತರ ಸೇವೆಯನ್ನು ಮಾಡುವ ಅವಕಾಶವು ನಮಗೆ ದೊರೆತಿದೆ. ನಮ್ಮ ಪ್ಯಾನಲ್ ಗೆ ಆಶೀರ್ವಾದ ಮಾಡಿದರೆ ರೈತರ ಸೇವೆಗೆ ನಾವು ಬದ್ಧರಾಗಿ ಕೆಲಸವನ್ನು ಮಾಡುತ್ತೇವೆ. ಸಹಕಾರಿ ಸಂಘಗಳನ್ನು ಬೆಳೆಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬೈಯುವುದನ್ನು ಬಿಟ್ಟು ರೈತರ ಸೇವೆಗೆ ಮುಂದಾಗಿ ಕೆಲಸ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿರೋಧಿಗಳಿಗೆ ಸಲಹೆ ಮಾಡಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕ ರಾಜೇಂದ್ರ ಅಂಕಲಗಿ, ಅಶೋಕ ಪಟ್ಟಣಶೆಟ್ಟಿ, ಬಸಪ್ಪ ಮರಡಿ,
ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Fast9 News

Check Also

ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ತಾಲ್ಲೂಕು ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ , ಉಪಾಧ್ಯಕ್ಷರಾಗಿ ಕಾಗಣೀಕರ ಅವಿರೋಧ ಆಯ್ಕೆ

Spread the loveಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ತಾಲ್ಲೂಕು …

Leave a Reply

Your email address will not be published. Required fields are marked *