Breaking News

ದೇವರು,ಮತದಾರರ ಆಶಿರ್ವಾದದಿಂದ ನಮ್ಮ ಪ್ಯಾನೇಲ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ:ಬೆಮೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ವಿಶ್ವಾಸ

Spread the love

ದೇವರು,ಮತದಾರರ ಆಶಿರ್ವಾದದಿಂದ ನಮ್ಮ ಪ್ಯಾನೇಲ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ:ಬೆಮೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ವಿಶ್ವಾಸ

ಹುಕ್ಕೇರಿ- ನಾಳೆ ರವಿವಾರದಂದು (ಸೆ.28) ನಡೆಯುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪ್ಯಾನಲ್ ಗೆ ಮತವನ್ನು ನೀಡಿ ಆಶೀರ್ವಾದ ಮಾಡುವಂತೆ ಬೆಮುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಮತದಾರರಲ್ಲಿ ಕೋರಿದರು.

ಶುಕ್ರವಾರದಂದು ವಿದ್ಯುತ್ ಸಹಕಾರಿ ಸಂಘದ ನಿಮಿತ್ತ ಹುಕ್ಕೇರಿ ಪಟ್ಟಣದ ಮಕಾನದಾರ ಹಾಲ್ ನಲ್ಲಿ ಜರುಗಿದ ಚುನಾವಣೆ ಪ್ರಚಾರಾರ್ಥವಾಗಿ ಮಾತನಾಡಿದ ಅವರು, ನಮ್ಮ ಪ್ಯಾನಲ್ ಎಂದೆಂದಿಗೂ ರೈತರ ಸೇವೆಗೆ ಸದಾ ಬದ್ಧವಾಗಿದೆ ಎಂದರು.
ದಿ. ಅಪ್ಪಣ್ಣಗೌಡ ಪಾಟೀಲರು ರೈತರ ಬದುಕು ಹಸನಾಗುವ ಉದ್ದೇಶದಿಂದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಆದರೆ 30 ವರ್ಷಗಳಿಂದ ಅಧಿಕಾರ ನಡೆಸುತ್ತಿರುವವರು ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಾರಣ, ಈ ಸಂಘವನ್ನು ಪುನಶ್ಚೇತನ ಮಾಡುವ ಉದ್ದೇಶದಿಂದ ಹೊಸ ಸಹಕಾರಿ ಪ್ಯಾನಲ್ ರಚಿಸಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯವಾಗಿದೆ. 15 ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ಚುನಾವಣೆಯನ್ನು ನಾವೆಲ್ಲರೂ ಶಾಂತಿ, ಸಮಾಧಾನದಿಂದ ಮಾಡುತ್ತಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ. ಯಾರಿಗೆ ಅಂಜಿಕೆ- ಅಳಕು ಇದೆಯೋ ಅವರು ತುಂಬಾ ಒತ್ತಡಕ್ಕೆ ಮಣಿದು ಪ್ರಚಾರ ಸಭೆಯಲ್ಲಿ ಎನೇನೋ ಮಾತನಾಡುತ್ತಿದ್ದಾರೆ. ನಾವು ಮಾತ್ರ ಅತ್ಯಂತ ಶಾಂತಿಯಿಂದ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದು, ನಮಗೆ ಈ ತಾಲ್ಲೂಕಿನ ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
10 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ನಮ್ಮ ಪ್ಯಾನಲ್ ದಿಂದ
ಆಯ್ಕೆಯಾಗಲಿದ್ದಾರೆ. ಉಳಿದಿರುವಂತೆ ಎಲ್ಲ ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ದೇವರು, ಮತದಾರರ ಆಶೀರ್ವಾದದಿಂದ ನಮ್ಮ ಪ್ಯಾನೆಲ್ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತವೆಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿಯವರು ಈ ಸಂಘಕ್ಕೆ 7800 ಹೊಸ ಸದಸ್ಯರನ್ನು ಮಾಡಿಸಿಕೊಂಡಿದ್ದರು. ಇದನ್ನು ನಮ್ಮ ವಿರೋಧಿಗಳು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಪ್ರಕರಣ ದಾಖಲಿಸಿದ್ದರು. ಆದರೆ ಉಚ್ಚ ನ್ಯಾಯಾಲಯವು ಹೊಸ ಸದಸ್ಯರ ನೇಮಕವನ್ನು ಪುರಸ್ಕರಿಸಿದ್ದರಿಂದ ನಮ್ಮ ಅಭ್ಯರ್ಥಿಗಳಿಗೆ ಹೊಸ ಮತದಾರರು ಆಸರೆಯಾಗಲಿದ್ದಾರೆ. ವಿರೋಧಿ ಬಣದ ಸುಮಾರು 4 ಸಾವಿರ ಸದಸ್ಯರನ್ನು ತಿರಸ್ಕಾರ ಮಾಡುವ ಮೂಲಕ ಅವರಿಗೆ ಹಿನ್ನಡೆಯಾಗಿದೆ. ನಮಗೆ ಇದು ವರದಾನವಾಗಲಿದೆ ಎಂದು ತಿಳಿಸಿದರು.
*ಮುಸ್ಲಿಂ ರಿಗೆ ಆದ್ಯತೆ*
ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕಿನ ಚುನಾವಣೆ ಮುಗಿದ ಬಳಿಕ ಮುಸ್ಲಿಂ ಸಮುದಾಯಕ್ಕೆ ಆದ್ಯತೆಯನ್ನು ನೀಡಲಾಗುವುದು. ಬಿಡಿಸಿಸಿ ಬ್ಯಾಂಕ್ ಗೆ ಮುಸ್ಲಿಂ ಸಮಾಜಕ್ಕೆ ಸೇರಿರುವ ವ್ಯಕ್ತಿಯೊಬ್ಬರನ್ನು ನಿರ್ದೇಶಕರನ್ನಾಗಿ ಮಾಡುವ ಮುನ್ಸೂಚನೆಯನ್ನು ನೀಡಿದರು.
ಮುಖಂಡರು, ವಿದ್ಯುತ್ ಸಂಘದ ಎಲ್ಲ ಉಮೇದುವಾರರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾ ಸಾಹೇಬ ಜೊಲ್ಲೆಯವರು ಕಣಗಲಾ ಜಿ.ಪಂ. ಕ್ಷೇತ್ರದ ಸೋಲ್ಲಾಪೂರಕ್ಕೆ ತೆರಳಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

*ಕೋಟ್*
ಹುಕ್ಕೇರಿ ತಾಲೂಕಿನ ಜನರಿಗೆ ನಾವು ಒಳ್ಳೆಯದನ್ನು ಮಾಡಲಿಕ್ಕೆ ಬಂದಿದ್ದೇವೆ. ನಷ್ಟ- ಕಷ್ಟದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘಕ್ಕೆ ಈಗಾಗಲೇ ಕಾಯಕಲ್ಪವನ್ನು ಮಾಡಲಾಗುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಮರ್ಥ ಮಾರ್ಗದರ್ಶನದಲ್ಲಿ ಎರಡು ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯನ್ನು ಕಾಣಲಿವೆ. ನಿಮ್ಮ ತಾಲೂಕಿನ ಅಭ್ಯರ್ಥಿಗಳು ಕಣದಲ್ಲಿದ್ದು, ಅವರಿಗೆ ಮತ ಹಾಕಿ ಗೆಲ್ಲಿಸಬೇಕು. ಈ ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸಲು ಬದ್ಧರಿದ್ದೇವೆ.
*-ಅಣ್ಣಾಸಾಹೇಬ ಜೊಲ್ಲೆ*
*ಮಾಜಿ ಸಂಸದ*


Spread the love

About Fast9 News

Check Also

ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ತಾಲ್ಲೂಕು ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ , ಉಪಾಧ್ಯಕ್ಷರಾಗಿ ಕಾಗಣೀಕರ ಅವಿರೋಧ ಆಯ್ಕೆ

Spread the loveಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ತಾಲ್ಲೂಕು …

Leave a Reply

Your email address will not be published. Required fields are marked *