- ಸುರಿಯುತ್ತಿರುವ ಭಾರಿ ಮಳೆಯಿಂದ ಪಕ್ಕದ ಮನೆಯ ಗೊಡೆ ಬಿದ್ದು 3 ವರ್ಷದ ಮಗು ಸಾವು

ಗೋಕಾಕ : ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಪಕ್ಕದ ಮನೆಯ ಗೊಡೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ನಡೆದಿದೆ.
ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಸುಕಿನ ಜಾವ ಸುಮಾರು 6 ಗಂಟೆಯ ಹೊತ್ತಿಗೆ ಮನೆಯ ಗೊಡೆ ನೆನೆದು ಪಕ್ಕದ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ 3 ವರ್ಷದ ಕೀರ್ತೀಕ್ ನಾಗೇಶ ಪೂಜೇರಿ ಹೆಣ್ಣು ಮಗು ಕುಸಿದು ಬಿದ್ದ ಗೊಡೆಯಲ್ಲಿ ಸಿಲುಕಿ ಪ್ರಾಣ ಬಿಟ್ಟಿದೆ, ಇನ್ನು ಗಂಭೀರ ಗಾಯಗೊಂಡ ಇನ್ನೂಳಿದವರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಸುದ್ದಿ ತಿಳಿದ ನಗರ ಪೋಲಿಸ್ ಠಾಣೆಯ ಪಿಎಸ್ಐ ಕೆ,ವಾಲಿಕರ ಮತ್ರು ಗ್ರಾಮ ಲೆಕ್ಕಾಧಿಕಾರಿ ದೇಸಾಯಿಯವರು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಮಗುವಿನ ಸಾವು ತಮ್ಮ ಕಣ್ಮುಂದೆ ಆಗಿದ್ದನ್ನು ನೋಡಿದ ತಂದೆ ತಾಯಿಯ ಮತ್ತು ಕುಟುಂಬಸ್ಥರ ಅಕ್ರಂಧನ ಮುಗಿಲಮುಟ್ಟಿದೆ.
ಗೋಕಾಕ