Breaking News

ನಿವೃತ್ತ ಶಿಕ್ಷಕ ಬಸವರಾಜ ಪಾಗದ ಇವರಿಗೆ ಆತ್ಮೀಯ ಬಿಳ್ಕೊಡುಗೆ.

Spread the love

ನಿವೃತ್ತ ಶಿಕ್ಷಕ ಬಸವರಾಜ ಪಾಗದ ಇವರಿಗೆ ಆತ್ಮೀಯ ಬಿಳ್ಕೊಡುಗೆ.

ಗೋಕಾಕ : ಸಮೀಪದ ಕೊಣ್ಣೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ 2 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಶಿಕ್ಷಕ ಬಸವರಾಜ ಪಾಗದ ಅವರನ್ನು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮತ್ತು ಶಿಕ್ಷಕಿ,ಶಿಕ್ಷಕಿಯರು ಸನ್ಮಾನಿಸಿ ಬೀಳ್ಕೊಟ್ಟರು.

ಶಿಕ್ಷಣ ಸಂಯೋಜಕರಾದ ಎಸ್,ಬಿ,ಕಲ್ಲಟ್ಟಿ ಇವರು ಮಾತನಾಡಿ,‘ಪಾಗದ ಸರ್ ಅವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ 15 ವರ್ಷಸೇವೆ ಸಲ್ಲಿಸಿ ಶಿಕ್ಷಕರ ಜೊತೆಯಲ್ಲಿ ಉತ್ತಮ ಬಾಂದವ್ಯ ಹೊಂದಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು’ ಇಂತಹ ಗುರುಗಳನ್ನು ಪಡೆದಂತಹ ನಾವು ಮತ್ತು ವಿದ್ಯಾರ್ಥಿಗಳು ಪುಣ್ಯ ಮಾಡಿದ್ದೇವೆ ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಆಶ್ವತ ದಳವಾಯಿ ಶಿಕ್ಷಕ ಹುದ್ದೆಗಿಂತ ಜಗತ್ತಿನಲ್ಲಿ ಶ್ರೇಷ್ಟವಾದ ಹುದ್ದೆ ಜಗತ್ತಿನಲ್ಲಿ ಯಾವುದೂ ಇಲ್ಲ,ರಾಮಾಯಣ ಮಹಾಭಾರತದಲ್ಲಿಯೂ ಕೂಡ ಗುರುಗಳಿದ್ಧರು, ಪೂರ್ವ ಜನ್ಮ ಪಣ್ಣಗಳಿಂದ ಶಿಕ್ಷಕ ಹುದ್ದೆ ಸಿಗುತ್ತದೆ, ಪಾಗದ ಇವರ ಸೇವೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಿದ್ದಾರೆ, ಇವತ್ತಲ್ಲ ನಾಳೆ ಎಲ್ಲ ಶಿಕ್ಷಕರಿಗೂ ನಿವೃತ್ತಿಯಾಗುತ್ತದೆ. ಪುಟಿಯುವ ಉತ್ಸಾಹವನ್ನು ಪಾಗದ ಇವರು ಹೊಂದಿದ್ದರು, ಅವರ ಸೇವೆ ನಮಗೆಲ್ಲಾ ಸಿಕ್ಕಿದ್ದು ಸ ಔಭಾಗ್ಯ ಎಂದರು.

ಗೋಕಾಕ ವಲಯದ ಶಿಕ್ಷಣ ಸಂಯೋಜಕರಾದ ಎನ್,ಆರ್, ಪಾಟೀಲ ಇವರು ಮಕ್ಕಳಿಗೆ ಒಡಪು ಹೇಳುವ ಮೂಲಕ ಪಾಗದ ಅವರ ಬಾಂದವ್ಯದ ಬಗ್ಗೆ ಹಂಚಿಕೊಂಡರು, ಅನುಭವ ಇದ್ದಲ್ಲಿ ಅಮೃತ ಇರುತ್ತದೆ, ಅದರಂತೆ ನೆಚ್ಚಿನ ಅನುಭವಿ ಶಿಕ್ಷಕರಾಗಿ ನಿವೃತ್ತಿ ಆಗುತ್ತಿರುವುದು ನಿಜ ಆದರೆ ಅವರನ್ನು ದೈಹಿಕವಾಗಿ ಬಿಳ್ಕೋಡುತಿದ್ದೇವೆ ಹೊರತು ಹೃದಯದಿಂದಲ್ಲ ಎಂದು ಹೇಳಿ ಈ ಶಾಲಾ ಮಕ್ಕಳು ಕೂಡ ತಮ್ಮ ಗುರುಗಳಂತೆ ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಬೇಕೆಂದು ಕಿವಿ ಮಾತು ಹೇಳಿದರು.

ಇನ್ನು ಸ್ಥಳಿಯ ಮುಖ್ಯ ಶಿಕ್ಷಕಿ ಇವರು ಮಾತನಾಡಿ ಇವತ್ತು ನಿವೃತ್ತಿಯಾದ ಪಾಗದ ಇವರಿಂದ ನಾವು ಶಿಸ್ತು,ಸಮಯ ಪಾಲನೆ, ಕೆಲಸದಲ್ಲಿನ ಭಕ್ತಿಯನ್ನು ನೋಡಿ ಕಲಿಯಬೇಕಾಗಿದೆ.
ಹಿರಿಯರಲ್ಲಿ ಹಿರಿಯರಾಗಿ ಕಿರಿಯರಲ್ಲಿ ಕಿರಿಯಾರಾಗಿ ಮಕ್ಕಳ ಜೊತೆ ಮಕ್ಕಳಾಗಿ ಸದಾ ಹಸನ್ಮುಖಿ ಇದ್ದು ಅವರು ಕಲಿಸಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತೇವೆಂದು ಭಾವುಕರಾಗಿ ಹೇಳಿ ಅವರ ನಿವೃತ್ತಿ ಜೀವನ ಸದಾ ಹಸನ್ಮುಖಿಯಾಗಿರಲಿ ಎಂದು ಹರಿಸಿದರು.

ಈ ಸಂದರ್ಭದಲ್ಲಿ ಗೋಕಾಕ ವಲಯದ ಶಿಕ್ಷಣ ಸಂಯೋಜಕರಾದ ಎಸ್,ಬಿ,ಕಲ್ಲಟ್ಟಿ,
ಬಿ,ಆರ್,ಪಿ ಅಶ್ವತ ದಳವಾಯಿ, ಅದೃಶ್ಯ ಕಬ್ಬೂರ, ಮುಖ್ಯೋಪಾದ್ಯಾಯರಾದ ಎನ್,ಟಿ,ಬಡವಣಿ ಸಂಘದ ಅದ್ಯಕ್ಷರ ಶ್ರೀಮತಿ ಬಾಗೆನ್ನವರ, ಸಿ,ಆರ್,ಸಿ, ಬಿ,ಎಚ್, ಪಿರಜಾದೆ,ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಮ್,ಎಮ್,ಪಿರಜಾದೆ,ಶಿಕ್ಷಕರಾದ ಬಿ,ಬಿ,ಕಿಚಡಿ,
ಶಾಂತಿಸಾಗರ ಶಾಲೆಯ ಮುಖ್ಯ ಶಿಕ್ಷಕಿ ಕು‌. ಸುಧಾ ಪೂಜೇರಿ, ಮಹೇಶ್ವರಿಪಾಟೀಲ.ಎಚ್,ಡಿ,ಗಾಣಿಗೇರ.ಎಸ್,ಡಿ,ಎಮ್,ಸಿ,ಅದ್ಯಕ್ಷ ಶ್ರೀಮತಿ ಕಲಾಲ, ಉಪಸ್ಥಿತರಿದ್ದರು.

ಸಹ ಶಿಕ್ಷಕಿಯಾದ ಕುಳ್ಳೂರ ಇವರು ನಿವೃತ್ತರಾದ ಬಸವರಾಜ ಪಾಗದ ಇವರ ಪರಿಚಯ ಮತ್ತು ಅವರ ಸೇವೆಯ ಬಗ್ಗೆ ವಿವರಿಸಿದರು.ಸ್ವಾಗತ ಭಾಷಣವನ್ನು ಶ್ರೀಮತಿ ಪಿ,ಎಮ್,ಜಾದವ ಮಾಡಿದರು,ಸಹಶಿಕ್ಷಕರಾದ ಮಲಿಕ ಬಾಗವಾನ ಇವರು ನಿರೂಪಣೆ ಮಾಡಿದರು.


Spread the love

About Fast9 News

Check Also

ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …

Leave a Reply

Your email address will not be published. Required fields are marked *