ದಿ.23 ರಂದು ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆ ವತಿಯಿಂದ ‘ಅಣ್ಣತಂಗಿ’ ಅನುಬಂಧ ಕಾರ್ಯಕ್ರಮ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆ ವತಿಯಿಂದ ದಿ.23 ರಂದು ಮುಂಜಾನೆ 10.30 ಗಂಟೆಗೆ ‘ಅಣ್ಣತಂಗಿ’ ಅನುಬಂಧ ಕಾರ್ಯಕ್ರಮವು ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಗೋಕಾಕದ ಜ್ಞಾನಮಂದಿರದ ಧರ್ಮದರ್ಶಿನಿ ಸುವರ್ಣಾತಾಯಿ ಹೊಸಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಚಿಕ್ಕೋಪ್ಪ-ಬಳೋಬಾಳದ ಚಿದಾನಂದ ಶರಣರು, ಆನಂದ ಹಮ್ಮನವರ. ಎಸ್ ಡಿಎಂಸಿ ಅಧ್ಯಕ್ಷ ಸಾತಪ್ಪ ಚಿಕ್ಕೋಡಿ, ಸನ್ಮಾನಿತರಾಗಿ ನಿವೃತ್ತ ಜಂಟಿ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಗಜಾನನ ಮನ್ನಿಕೇರಿ ಅವರು ಆಗಮಿಸುವರು. ಎಂದು ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನಿಜಗುಣ ದೇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.