Breaking News

ಡಾ: ಬಾಬು ಜಗಜೀವನರಾಮ ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ: ಡಾ: ಮೊಹನ‌ ಬಸ್ಮೆ

Spread the love

ಡಾ: ಬಾಬು ಜಗಜೀವನರಾಮ ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ: ಡಾ: ಮೊಹನ‌ ಬಸ್ಮೆ

ಗೋಕಾಕ ತಾಲೂಕ ಆಡಳಿತ ತಾಲೂಕ ಪಂಚಾಯತ ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಸ್ಪೃಶ್ಯತೆಯ ನಿವಾರಣಾ ಹೋರಾಟದ ಮುಂಚೂಣಿ ವಹಿಸಿದ ಧೀಮಂತ ನಾಯಕ ಶೋಷಿತರ ದಮನಿತರ ಧ್ವನಿ. ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಅವರ 118 ನೇ ಜನ್ಮದಿನವನ್ನು ಆಚರಿಸುವ ಮೂಲಕ ಅವರಿಗೆ ಗೌರವದ ನಮನಗಳನ್ನು ಸಲ್ಲಿಸಲಾಯಿತು.

ಗೋಕಾಕ ತಹಸಿಲ್ದಾರ ಡಾ.ಮೋಹನ ಭಸ್ಮೆ ಮಾತನಾಡಿ ಬಾಬು ಜಗಜೀವನರಾಮ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಸ್ವಾತಂತ್ರ್ಯನಂತರ ಭಾರತ ಸರ್ಕಾರದ ಸಚಿವರಾಗಿ, ಉಪ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ನಾಯಕರು. ಕೃಷಿ ಸಚಿವರಾಗಿದ್ದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅನುಷ್ಠಾನಗೊಳಿಸಿ ಆಹಾರ ಧಾನ್ಯಗಳ ಕೊರತೆ ನೀಗಿಸಿದ ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡರು. ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.

ಇದೆ ಸಂದರ್ಭದಲ್ಲಿ ಗೋಕಾಕ ತಹಸೀಲ್ದಾರರ ಮೂಲಕ ಮಾನ್ಯ ಪ್ರಧಾನಮಂತ್ರಿ ಯವರಿಗೆ ಪತ್ರಗಳ ಮೂಲಕ ದಲಿತ ಮುಖಂಡರು ಬಾಬುಜಗಜೀವನರಾಮ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಬೇಕೆಂದು ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಮುಖಂಡರು ತಮ್ಮ ಕೈಗಳಿಂದ ತಾವೆ ಬರೆದು ಪತ್ರಗಳ ಮುಖಾಂತರ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಏ.ಬಿ.ಮಲಬನ್ನವರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಗಳು.ಗೋಕಾಕ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ.ಡಾ: ಮುತ್ತಪ್ಪ ಕೊಪ್ಪದ. ತಾಲೂಕಿನ ಪರಿಶಿಷ್ಟ ಜಾತಿಯ ವಿವಿದ ಸಂಘಟನೆಗಳ ಮುಖಂಡರು.ಪದಾಧಿಕಾರಿಗಳು ಮತ್ತು ಎಲ್ಲ ಸಮುದಾಯದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.


Spread the love

About Fast9 News

Check Also

ರಾಯಬಾಗದಲ್ಲಿ ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ.

Spread the loveರಾಯಬಾಗದಲ್ಲಿ ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ. ರಾಯಬಾಗ : ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕೆಲ …

Leave a Reply

Your email address will not be published. Required fields are marked *