Breaking News

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಸ್ತಿತ್ವಕ್ಕೆ! ಯಾಕೆ,,?

Spread the love

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಸ್ತಿತ್ವಕ್ಕೆ! ಯಾಕೆ,,?

ಬೆಳಗಾವಿ, ಫೆ.18 – ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು ಎಲ್ಲರೂ ಸೇರಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ (ರಿ) ರಚನೆ ಮಾಡಲಾಯಿತು.
ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರರು ಸರ್ವಸಮ್ಮತವಾಗಿ ಈ ಬಗ್ಗೆ ತೀರ್ಮಾನ ಕೈಗೊಂಡರು.‌

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ (ರಿ) ಗೌರವ ಅಧ್ಯಕ್ಷರಾಗಿ ನ್ಯೂಸ್ ಫಸ್ಟ್ ಹಿರಿಯ ವರದಿಗಾರ ಶ್ರೀಕಾಂತ ಕುಬಕಡ್ಡಿ, ಅಧ್ಯಕ್ಷ ಸ್ಥಾನಕ್ಕೆ ಪವರ್ ಟಿವಿ ಜಿಲ್ಲಾ ವರದಿಗಾರ ಮಂಜುನಾಥ ಪಾಟೀಲ್, ಉಪಾಧ್ಯಕ್ಷರಾಗಿ ಪ್ರಜಾ ಟಿವಿ ಜಿಲ್ಲಾ ವರದಿಗಾರ ಚಂದ್ರು ಶ್ರೀರಾಮುಡು, ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಸ್18 ಕನ್ನಡ ಜಿಲ್ಲಾ ವರದಿಗಾರ ಚಂದ್ರಕಾಂತ ಸುಗಂಧಿ, ಸಹ ಕಾರ್ಯದರ್ಶಿಯಾಗಿ ಟಿವಿ9 ವಿಡಿಯೋ ಜರ್ನಲಿಸ್ಟ್ ಪ್ರವೀಣ ಶಿಂಧೆ ಹಾಗೂ ಖಜಾಂಚಿಯಾಗಿ ಸುವರ್ಣನ್ಯೂಸ್ ಜಿಲ್ಲಾ ವರದಿಗಾರ ಅನಿಲ್ ಕಾಜಗಾರ್‌ರನ್ನಾಗಿ ಆಯ್ಕೆ ಮಾಡಲಾಯಿತು

ಸಭೆಯಲ್ಲಿ ಕಸ್ತೂರಿ ಟಿವಿ ಜಿಲ್ಲಾ ವರದಿಗಾರ ಸಂತೋಷ ‌ಶ್ರೀರಾಮುಡು, ಟಿವಿ5 ಕನ್ನಡ ಜಿಲ್ಲಾ ವರದಿಗಾರ ಶ್ರೀಧರ ಕೊಟಾರಗಸ್ತಿ, ಪಿಟಿಐ(ವಿಡಿಯೋ) ಸುದ್ದಿಸಂಸ್ಥೆಯ ಜಿಲ್ಲಾ ವರದಿಗಾರ ಮಹಾಂತೇಶ ಕುರಬೇಟ,ಟಿವಿ9 ಜಿಲ್ಲಾ ವರದಿಗಾರ ಸಹದೇವ ಮಾನೆ, ರಿಪಬ್ಲಿಕ್ ಕನ್ನಡ ಜಿಲ್ಲಾ ವರದಿಗಾರ ಮೈಲಾರಿ ಪಟಾತ್, ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ ರೆಡ್ಡಿ, ಈಟಿವಿ ನ್ಯೂಸ್ ಜಿಲ್ಲಾ ವರದಿಗಾರ ಸಿದ್ದನಗೌಡ ಪಾಟೀಲ್ ಸೇರಿ ಇತರರು ಉಪಸ್ಥಿತರಿದ್ದರು.

ಎಲ್ಲಾ ಎಲೆಕ್ಟ್ರಾನಿಕ್ ಮೀಡಿಯಾದ ಸದಸ್ಯರು ನೂತನವಾಗಿ ಆಯ್ಕೆಯಾದ ಎಲ್ಲರಿಗೂ ಶುಭಾಶಯ ತಿಳಿಸಿದರು. ಎಲ್ಲರೂ ಒಂದೇ ಸೂರಿನಡಿ ಬರುವ ಸಕಾರಾತ್ಮಕ ದೃಷ್ಟಿಯಿಂದ ಸಂಘ ರಚನೆ ಮಾಡಲಾಗಿದ್ದು ಶೀಘ್ರದಲ್ಲಿಯೇ ಉದ್ಘಾಟನಾ ಸಮಾರಂಭ ನೆರವೇರಿಸಲಾಗುವುದು ಎಂದು ನೂತನ ಅಧ್ಯಕ್ಷ ಮಂಜುನಾಥ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.


Spread the love

About Fast9 News

Check Also

ಅಟ್ರಾಸಿಟಿ ಪ್ರಕರದಲ್ಲಿನ ಆರೋಪಿಯನ್ನು ಬಂದಿಸುವಂತೆ ದಲಿತ ಸಂಘಟನೆಯಿಂದ ಪ್ರತಿಭಟನೆ

Spread the loveಅಟ್ರಾಸಿಟಿ ಪ್ರಕರದಲ್ಲಿನ ಆರೋಪಿಯನ್ನು ಬಂದಿಸುವಂತೆ ದಲಿತ ಸಂಘಟನೆಯಿಂದ ಪ್ರತಿಭಟನೆ ವರದಿ : ಮನೋಹರ ಮೇಗೇರಿ ಗೋಕಾಕ : …

Leave a Reply

Your email address will not be published. Required fields are marked *