ವಿರೋಧದ ನಡುವೆ ಗೊಹತ್ಯೆ ನಿಷೇದ ಮಸೂದೆಗೆ ಅಂಗಿಕಾರ
ಬೆಂಗಳೂರು ; ತೀವ್ರ ವಿರೋಧದ ನಡುವೆಯೂ ವಿಧಾನ ಸಭೆಯಲ್ಲಿ ಗೋ ಹತ್ಯೆ ನಿಷೇಧ ವಿದೇಯಕವನ್ನು ಮಂಡಿಸಲಾಯಿತು.
ಬುಧವಾರ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಅವರು ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದು ಅಂಗೀಕಾರಗೊಂಡಿದೆ.
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗೋಹತ್ಯೆ ನಿಷೇಧ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು, ಅಲ್ಲದೆ ಮುಸ್ಲಿಂ ಧಾರ್ಮಿಕ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗೋಹತ್ಯೆ ನಿಷೇಧ ಮಸೂದೆ ಜಾರಿಯಾಗದಂತೆ ಚರ್ಚೆಯನ್ನು ನಡೆಸಿದ್ದರು.
ಗೋಹತ್ಯೆ ನಿಷೇಧಗೊಂಡರೆ ಹಲವಾರು ಕುಟುಂಬಗಳು ದಾರಿಗೆ ಬೀಳುತ್ತವೆ ಹಾಗಾಗಿ ಅದನ್ನೇ ನಂಬಿಕೊಂಡು ಜೀವನ ನಡೆಸುವ ಹಲವು ಕುಟುಂಬಗಳು ತೊಂದರೆ ಅನುಭವಿಸುತ್ತವೆ ಎಂದು ಹೇಳಲಾಗಿತ್ತು. ಆದರೆ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿತ್ತು ಅದರಂತೆ ಇಂದು ಗೋಹತ್ಯೆ ವಿದೇಯಕ ಮಂಡಿಸಿದ್ದು ಸ್ಪೀಕರ್ ಅಂಗೀಕಾರಗೊಳಿಸಿದ್ದಾರೆ.