Breaking News

ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

Spread the love

ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿ : ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

ಗೋಕಾಕ- ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ ಜರುಗಲಿದ್ದು, ಪಟ್ಟಣದ ನಾಗರೀಕರು ಇದರಲ್ಲಿ ಭಾಗಿಯಾಗುವ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕಕರಲ್ಲಿ ಮನವಿ ಮಾಡಿಕೊಂಡರು.
ಗುರುವಾರದಂದು ನಗರದ ಎನ್ ಎಸ್ ಎಫ್ ಕಚೇರಿಯಲ್ಲಿ ಮೂಡಲಗಿ ಪಟ್ಟಣದ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿನಾದ್ಯಂತ ನಡೆಯುವ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅವರು ಕೋರಿದರು.
ನಮ್ಮ ಪ್ರಾಚೀನ ಕಾಲದಿಂದಲೂ ಸಾಧು- ಸಂತರು ಈ ಯೋಗವನ್ನು ಮಾಡಿಕೊಂಡು ಬಂದಿರುವುದು ಇತಿಹಾಸವಾಗಿದೆ. ಭಾರತದಿಂದಲೇ ಯೋಗಕ್ಕೆ ಜಾಗತಿಕವಾಗಿ ಮಹತ್ವ ಬಂದಿದೆ. ವಿಶ್ವದ 185 ದೇಶಗಳಲ್ಲಿ ಈ ಯೋಗವು ಏಕಕಾಲದಲ್ಲಿಯೇ ನಡೆಯಲಿದೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಡೀ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದು, ಇದನ್ನು ಯಶಸ್ವಿ ಮಾಡಲು ಮೂಡಲಗಿಯ ಪಾರ್ಶಿಯವರ ಆರ್ ಡಿ ಎಸ್ ಕಾಲೇಜಿನಲ್ಲಿ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಬರುವ ಜೂನ್ 21 ರಂದು ಬೆಳಗಿನ ಜಾವ 6.00 ಗಂಟೆಗೆ ಪಟ್ಟಣದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹಾಜರಿರಬೇಕು. ಇದರ ಜತೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಹ ಉಪಸ್ಥಿತರಿರಬೇಕು.‌ ಈ ಮಹತ್ವ ಪೂರ್ಣ ಯೋಗ ದಿನಾಚರಣೆಯಲ್ಲಿ ನಾನು ಕೂಡ ಮೂಡಲಗಿಯಲ್ಲಿ ಬೆಳಿಗ್ಗೆ ಹಾಜರಿದ್ದು, ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ವರ್ಷದಲ್ಲಿಯೇ ಜೂನ್ 21 ರಂದು ಮಾತ್ರ ಅತೀ ದೀರ್ಘಾವಧಿ ದಿನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯು ಯೋಗವನ್ನು ಜಾಗತೀಕವಾಗಿ ಆಚರಿಸಲು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಸೂಚನೆಯನ್ನು ನೀಡಿದೆ ಎಂದು ಅವರು ಹೇಳಿದರು.
ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ತಾ. ಪಂ. ಇ. ಓ ಫಕೀರಪ್ಪ ಚಿನನ್ನವರ, ಮುಖಂಡ ಬಸವಪ್ರಭು ನಿಡಗುಂದಿ, ಜಿಲ್ಲಾ ಆಯುಷ್ಯ ವೈದ್ಯಾಧಿಕಾರಿ ಡಾ. ಶ್ರೀಕಾಂತ ಸುಣಧೋಳಿ, ಗೋಕಾಕ ತಾ. ಪಂ. ಇ ಓ ಪರಶುರಾಮ ಗಸ್ತಿ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಘಟಪ್ರಭಾ ಸಿಪಿಐ ಎಚ್.ಡಿ.ಮುಲ್ಲಾ, ಮೂಡಲಗಿ ಪುರಸಭೆಯ ಸದಸ್ಯರು, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.


Spread the love

About Fast9 News

Check Also

ಪೋಲಿಸ್ ಉಪ ವಿಭಾಗದ ನೂತನ ಅಧಿಕಾರ ವಹಿಸಿಕೊಂಡ DSP ರವಿ ಡಿ ನಾಯಿಕ ಅವರಿಗೆ ಸತ್ಕಾರ

Spread the loveಪೋಲಿಸ್ ಉಪ ವಿಭಾಗದ ನೂತನ ಅಧಿಕಾರ ವಹಿಸಿಕೊಂಡ DSP ರವಿ ಡಿ ನಾಯಿಕ ಅವರಿಗೆ ಸತ್ಕಾರ ಗೋಕಾಕ:ಗೋಕಾಕ …

Leave a Reply

Your email address will not be published. Required fields are marked *