ರೋಗಿಗಳ ಅನುಕೂಲಕ್ಕಾಗಿ ಸ್ವಂತ ಹಣ ನೀಡಿ ದುರಸ್ತಿ ಮಾಡಿಸಿ ನವೀಕರಣಗೊಳಿಸಿದ ಮಾದರಿ ಶಾಸಕ. ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿಗೆ ಷಹಬಾಷ ಎಂದ ಮೂಡಲಗಿ ಜನ ಮೂಡಲಗಿ : ಕೋವಿಡ್ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣ ಸಿರುವ ಅರಬಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ಮೂಡಲಗಿಯಲ್ಲಿ ಸೋಂಕಿತರಿಗಾಗಿ ಮತ್ತು …
Read More »ಮೂಡಲಗಿ ಸಿಪಿಐ ಮುರನಾಳ ಮೇಲೆ ಕ್ರಮಕೈಗೊಳ್ಳಲು ಎಸ್ಪಿ ಅವರಿಗೆ ಮನವಿ
ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದಾಗ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಪ್ರೆಸ್ ಕ್ಲಬ್ ಅಧ್ಯಕ್ಷ ವ್ಹಿ ಎಚ್ ಬಾಲರಡ್ಡಿ ಹೇಳಿದರು. ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೋಲಿಸ್ …
Read More »ಅಧಿಕಾರಿಯೊಳಗೆ ಮತ್ತೊಬ್ಬ ಅಧಿಕಾರಿ
ಮೂಡಲಗಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಆಗಿ ಬಂದಿದ್ದು, ತಹಶೀಲ್ದಾರ ಮೋಹನಕುಮಾರ ಭಸ್ಮೆಯವರಿಗೆ ಮೂಡಲಗಿ ಯಾವ ಋಣಾನುಬಂಧವೂ ಗೊತ್ತಿಲ್ಲ ಆದರೆ ಈ ಕೊರೋನಾ ಎರಡನೇ ಅಲೆ ಮುನ್ಸೂಚನೆಯಿಂದಲೂ ಆ ಭಗವಂತ ಅವರನ್ನು ಇಲ್ಲಿಗೆ ಕಳಿಸಿದ್ದಾನೆ ಎಂಬ ಭಾವನೆ ಮೂಡುತ್ತದೆ. ಮೋಹನಕುಮಾರ ಭಸ್ಮೆ ಅವರು ಬರೀ ತಹಶೀಲ್ದಾರ ಅಷ್ಟೇ ಅಲ್ಲ, ಅವರೊಳಗೆ ಇನ್ನೊಬ್ಬ ಅಧಿಕಾರಿ ಇದ್ದಾನೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ಭಸ್ಮೆ ಅವರು ಮೂಲತ …
Read More »ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ
ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ ಅಧಿಕಾರಿಗಳನ್ನುದ್ಧೇಶಿಸಿ ದೂರವಾಣಿಯಲ್ಲಿ ಮಾತನಾಡಿದರು. ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಸಕಲ ಸೌಲಭ್ಯಗಳನ್ನೊಳಗೊಂಡ …
Read More »ಸಂಜೆ 7 ರವರಗೆ ಮತದಾನದ ಸಮಯ ಹೆಚ್ಚಿಸಿದ ಚುನಾವಣೆ ಆಯೋಗ
ಗೋಕಾಕ: 02-ಬೆಳಗಾವಿ ಲೋಕಸಭಾ ಕ್ಷೇತ್ರ ಉಪ ಚುನಾವಣೆ 2021ರ ಕುರಿತು ಗೋಕಾಕದ ತಹಸಿಲ್ದಾರ ಕಚೇರಿಯಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಮಾನ್ಯ ಭಾರತ ಚುನಾವಣಾ ಆಯೋಗ ನವದೆಹಲಿ ಇವರು ವೇಳಾಪಟ್ಟಿಯನ್ನು ನಿಗದಿಪಡಿಸಿರುವ ಪ್ರಕಾರ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 288 ಮೂಲ ಮತಗಟ್ಟೆಗಳು ಹಾಗೂ 68 ಹೆಚ್ಚುವರಿಯಂತೆ ಒಟ್ಟು 356 ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಸದರಿ ಮತಗಟ್ಟೆಗಳ ಪೈಕಿ 109 ಮತಗಟ್ಟೆಗಳನ್ನು Crtical ಹಾಗೂ 27 ಮತಗಟ್ಟೆಗಳನ್ನು Vulnerable ಅಂತಾ ಗುರುತಿಸಲಾಗಿರುತ್ತದೆ. …
Read More »ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಮೂಡಲಗಿ: ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿರುವದರಿಂದ ಬಿಜೆಪಿಗೆ ಆನೆ ಬಲ ಬಂದಿದ್ದು, ಅರಭಾಂವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿಯಿಂದ ಬಿಜೆಪಿಗೆ ಶೇಕಡಾ 80 ರಷ್ಟು ಮತಗಳು ಲಭಿಸಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರ ಸಂಜೆ ಪಟ್ಟಣದ ಬಸವ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ …
Read More »ಮಂಗಳಾ ಅಂಗಡಿ ಅವರನ್ನು ಬೆಂಬಲಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
ಗೋಕಾಕ: ದೇಶದಾಧ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸಾರಥ್ಯದಲ್ಲಿ ಬಿಜೆಪಿಯ ಕಮಲ ಅರಳಿದ್ದು, ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಹಾಗೂ ಬೆಳಗಾವಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿದರು. ಮಂಗಳವಾರದಂದು ಸಂಜೆ ಇಲ್ಲಿಗೆ ಸಮೀಪದ ಮೆಳವಂಕಿ ಗೌಡನ ಕ್ರಾಸ್) …
Read More »ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್,
ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್, ಹೌದು ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣಾನಂತರ ತೆರವಾದ ಬೆಳಗಾವಿಯ ಉಪಲೋಕಸಭಾ ಚುನಾವಣೆಗೆ ಕೊನೆಗೂ ಕಾಂಗ್ರೇಸ್ ತನ್ನ ಅಬ್ಯರ್ಥಿಯನ್ನು ಘೋಷಣೆ ಮಾಡಿದ್ದು ಬೆಳಗಾವಿ ಕಾಂಗ್ರೇಸ್ಸಿಗರಿಗೆ ಹುಮ್ಮಸು ಮೂಡಿದೆ ಯಾಕೆಂದರೆ, ಕೈ ಟಿಕೇಟ ನೀಡಿದ್ದು ಮತ್ಯಾರಿಗೂ ಅಲ್ಲ ರಾಜಕೀಯಕ್ಜೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸೊಲರಿಯದ ಚಾಣಾಕ್ಷ ನಾಯಕ, ಬೆಳಗಾವಿ ಜಿಲ್ಲೆಯಲ್ಲಿಯೆ ಕಾಂಗ್ರಸ್ಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೊಗಬಲ್ಲ ಅದಲ್ಲದೆ ಜಿಲ್ಲೆಯ ರಾಜಕಾರಣ ಬಗ್ಗೆ ಚೆನ್ನಾಗಿ …
Read More »ಮೂಡಲಗಿ, ಪಂಚಮಸಾಲಿ ಸಮಾಜ ಬಾಂದವರು 2ಎ ಮಿಸಲಾತಿ ನೀಡುವಂತೆ ತಹಶೀಲದಾರ ಡಿ ಜೆ ಮಹಾತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಮೂಡಲಗಿ : ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು. ಗುರುವಾರದಂದು ಪಂಚಮಸಾಲಿ ಸಮಾಜ ಬಾಂಧವರು ರಾಜ್ಯ ಸರ್ಕರದ 2ಎ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ ಡಿ ಜೆ ಮಹಾತ …
Read More »ಗೋಕಾಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳಿಂದ ಅಪಸ್ವರ
ಗೋಕಾಕ: ನೆರೆ ಹಾವಳಿ ಹಾಗೂ ಕರೋನಾ ವೈರಸ್ಸನಿಂದಾಗಿ ತತ್ತರಿಸಿರುವ ಗೋಕಾವಿ ನಾಡಿನಲ್ಲಿ ಅದ್ದೂರಿ ಸಮ್ಮೇಳನ ಅವಶ್ಯಕತೆ ಇತ್ತಾ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಕಸಾಪ ತಾಲೂಕ ಘಟಕದ ವಿರುದ್ಧ ವಾಗ್ದಾಳಿ ನಡೆಸಿದರು. ಅವರು, ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಂಭಾವನೆ ನೀಡಿ ಚಿತ್ರ ನಟಿಯರನ್ನು ಕರೆ ತಂದು ಸಮ್ಮೇಳನ ನಡೆಸುವದು ಸರಿಯಲ್ಲ. ಸಾರ್ವಜನಿಕರು ನೀಡಿದ ಹಣ ದುರ್ಬಳಕೆಯಾಗಬಾರದು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿದ್ದಾರೆ ಎಂದು …
Read More »