Breaking News

ಸಂಜೆ 7 ರವರಗೆ ಮತದಾನದ ಸಮಯ ಹೆಚ್ಚಿಸಿದ ಚುನಾವಣೆ ಆಯೋಗ

Spread the love

 

ಗೋಕಾಕ: 02-ಬೆಳಗಾವಿ ಲೋಕಸಭಾ ಕ್ಷೇತ್ರ ಉಪ ಚುನಾವಣೆ 2021ರ ಕುರಿತು ಗೋಕಾಕದ ತಹಸಿಲ್ದಾರ ಕಚೇರಿಯಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ

ಮಾನ್ಯ ಭಾರತ ಚುನಾವಣಾ
ಆಯೋಗ ನವದೆಹಲಿ ಇವರು ವೇಳಾಪಟ್ಟಿಯನ್ನು ನಿಗದಿಪಡಿಸಿರುವ ಪ್ರಕಾರ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ
ಸಂಬಂಧಿಸಿದಂತೆ ಒಟ್ಟು 288 ಮೂಲ ಮತಗಟ್ಟೆಗಳು ಹಾಗೂ 68 ಹೆಚ್ಚುವರಿಯಂತೆ ಒಟ್ಟು 356 ಮತಗಟ್ಟೆಗಳನ್ನು
ಸ್ಥಾಪಿಸಲಾಗಿರುತ್ತದೆ. ಸದರಿ ಮತಗಟ್ಟೆಗಳ ಪೈಕಿ 109 ಮತಗಟ್ಟೆಗಳನ್ನು Crtical ಹಾಗೂ 27 ಮತಗಟ್ಟೆಗಳನ್ನು
Vulnerable ಅಂತಾ ಗುರುತಿಸಲಾಗಿರುತ್ತದೆ. ಒಟ್ಟು 205 ಮತಗಟ್ಟೆಗಳಲ್ಲಿ Web Casting, 25 ಮತಗಟ್ಟೆಗಳಲ್ಲಿ
Micro Observer, 16 ಮತಗಟ್ಟೆಗಳಲ್ಲಿ Video Grapher, 16 ತಂಡ CISF/CPMF, 27 ಮತಗಟ್ಟೆಗಳಲ್ಲಿ
ASI, 132 ಮತಗಟ್ಟೆಗಳಲ್ಲಿ Head Constrable, 186 ಮತಗಟ್ಟೆಗಳಲ್ಲಿ Police Constrable, 121
ಮತಗಟ್ಟೆಗಳಲ್ಲಿ Home Guardಗಳನ್ನು ನಿಯೋಜಿಸಲಾಗಿರುತ್ತದೆ. ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 1524
ಮತಗಟ್ಟೆ ಅಧಿಕಾರಿ / ಸಿಬ್ಬಂದಿಯವರುಗಳನ್ನು ನಿಯೋಜಿಸಲಾಗಿರುತ್ತದೆ. ಮತದಾನದ ಕುರಿತು ಒಟ್ಟು 356 ಎವಿಎಮ್
ಮತಯಂತ್ರಗಳನ್ನು ಬಳಸಲಾಗುತ್ತಿದೆ ಹಾಗೂ 63 ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು
ಸಂಬಂಧಪಟ್ಟ ಮತಗಟ್ಟೆಗಳಿಗೆ ಸಾಗಿಸುವ ಕುರಿತು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮತದಾನದ
ಸಮಯ ಮುಂಜಾನೆ 07.00 ಗಂಟೆಯಿಂದ ಸಾಯಂಕಾಲ 06 ರ ಬದಲಾಗಿ 07.00 ಗಂಟೆವರೆಗೆ ಹೆಚ್ಚಿಸಿದ್ದರಿಂದ ಸದರಿ ದಿನದಂದು ಮತದಾರರು
ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಹಿತಿಯನ್ನು ಸಹಾಯಕ ಚುನಾವಣಾಧಿಕಾರಿಗಳಾದ ಎಸ್,ಬಿ,ಗಂಟಿಯವರು ತಿಳಿಸಿರುತ್ತಾರೆ,

ಅದರಂತೆ ಗೋಕಾಕ ನಗರಸಭೆ ಆಯುಕ್ತರಾದ ಶಿವಾನಂದ ಹೀರೆಮಠ ಇವರು ಮತದಾನದ ಜೊತೆಯಲ್ಲಿ ಕೊರಾನಾ 2 ಅಲೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ದೃಷ್ಟಿಯಿಂದ ಮತದಾರರು ಕಡ್ಡಾಯವಾಗಿ ಮಾಸ್ಕ್ ದರಸಿಕೊಂಡು ಮತ ಚಲಾಯಿಸಲು ಬರವುದರ ಜೊತೆಯಲ್ಲಿ ಮತದಾನ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಹಾಗೂ ಒಂದು ವೇಳೆ ಮಾಸ್ಕ್ ತರಲು ಮರೆತಲ್ಲಿ ಸ್ಥಳಿಯ ಎಜೆಂಟರಲ್ಲಿ ಮಾಸ್ಕ್ ಕೇಳಿ ಪಡೆದುಕೊಂಡು ದರಿಸಿಕೊಂಡು ಬರಲು ವಿನಂತಿಸಿದರು.


Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *