Breaking News

ಚಿಂಚಲಿ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಚಾಲನೆ.

Spread the love

ಚಿಂಚಲಿ ಪಟ್ಟಣದಲ್ಲಿ ನಡೆಯುತ್ತಿರುವ
ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಚಾಲನೆ.

ಚಿಂಚಲಿ: ಗ್ರಾಮೀಣ ಭಾಗದಿಂದ ಬೆಳೆದು ಬಂದ ಫುಟಬಾಲ್ ಕ್ರೀಡೆಯು ಗ್ರಾಮೀಣ ಭಾಗದಲ್ಲಿ ಯುವಕರನ್ನು ಶ್ರೀಮಂತ ಕ್ರೀಡಾಪಟುಗಳಾಗಿ ಬೆಳೆಯುವುದಕ್ಕೆ ದಿ. ವಸಂತರಾವ ಪಾಟೀಲ ಹಾಗೂ ವಿವೇಕರಾವ್ ಪಾಟೀಲ ಸಾಕ್ಷಿಯಾಗಿದ್ದಾರೆಂದು ಕೋಲ್ಹಾಪೂರದ ಸಂಸ್ಥಾನ ಹಾಗೂ ಪಶ್ಚಿಮ ಭಾರತ ಫುಟಬಾಲ್ ಅಸೋಸಿಯೇಶನ್ ಉಪಾಧ್ಯಕ್ಷರಾದ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಹೇಳಿದರು.

ಅವರು ಚಿಂಚಲಿ ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಗಂಣದಲ್ಲಿ ನಡೆಯುತ್ತಿರುವ ಶ್ರೀ ಮಹಾಕಾಳಿ ಫುಟಬಾಲ್ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ “ಮಹಾಕಾಳಿ ಚಾಂಪಿಯನ್ ಟ್ರೋಫೀ-೨೦೨೧” ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಗೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಫುಟಬಾಲ ಕ್ರೀಡಾಂಗಣದ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ ಗಲ್ಲಿ ಗಲ್ಲಿಗಳಿಂದ ಮಕ್ಕಳು ಬಂದು ಈ ಫುಟಬಾಲ್ ಆಡವಾಡುವುದಕ್ಕೆ ಹೆಚ್ಚು ಆಸಕ್ತಿ ಹೊಂದುತ್ತಾರೆ. ಕ್ರೀಡಾ ಕೂಟದಲ್ಲಿ ಪಾಲ್ಗೋಳುವುದರಿಂದ ಕ್ರೀಡಾಪಟುಗಳಲ್ಲಿ ಸಹೋದರತೆಯ ಮನೋಭಾವನೆ ಬೆಳೆಯುತ್ತದೆ.

ಈ ರಾಷ್ಟ್ರಮಟ್ಟದ ಫುಟಬಾಲ ಪಂದ್ಯಾವಳಿ ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಹೆಚ್ಚು ಆಯೋಜನೆ ನಡೆಸುತ್ತಾರೆ ಆದರೆ ದೇಶದಲ್ಲಿ ಪ್ರಪ್ರಥಮವಾಗಿ ಗ್ರಾಮೀಣ ಮಟ್ಟದಲ್ಲಿ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು ವಿಶೇಷವಾಗಿದೆ ಇದಕ್ಕೆ ಮುಖ್ಯವಾಗಿ ಕಾರಣಿಭೂತರಾದ ಎಂಎಲ್‌ಸಿ ವಿವೇಕರಾವ ಪಾಟೀಲ ಹಾಗೂ ಗ್ರಾಮಸ್ಥರು ಹೆಚ್ಚಿನ ಶ್ರಮವಹಿಸಿದ್ದಾರೆ. ಹೆಚ್ಚು ಹೆಚ್ಚಾಗಿ ವಿದ್ಯಾರ್ಥಿಗಳು ಕ್ರೀಡೆ ಕಡೆಗೆ ಗಮನ ಹರಿಸುವ ಮೂಲಕ ಆರೋಗ್ಯವಂತರಾಗಿ ಬೆಳೆಯಬೇಕೆಂದು ಹೇಳಿದರು.
ವಿಧಾನಪರಿಷತ್ ಸದಸ್ಯರ ಹಾಗೂ ಕೆ.ಎಂ. ಎಫ್ ಬೆಳಗಾವಿ ಅಧ್ಯಕ್ಷರಾದ ವಿವೇಕರಾವ ಪಾಟೀಲ ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಭಾಗವಹಿಸುವುದ್ದು ಮುಖ್ಯ, ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ನಿಯಮಗಳನ್ನು ಪಾಲಿಸಿ ರಾಷ್ಟ್ರಿಯ ಕ್ರೀಡೆಗಳಲ್ಲಿ ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರಮಟ್ಟದಲ್ಲಿ ಬೆಳೆಯಬೇಕೆಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಇನ್ನು ಚಿಂಚಲಿ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು, ಕೇರಳಾ, ಮುಂಬೈಯ, ಕೋಲ್ಹಾಪೂರ, ಕೊಡಗು, ನಿಪ್ಪಾಣಿ, ಗಡಿಂಗ್ಲಜ್, ರಾಯಬಾಗ, ಜಮಖಂಡಿ, ಮಿರಜ ಸಾಂಗಲಿ, ಗೋಕಾಕ, ಚಿಂಚಲಿ, ಬೆಳಗಾವಿ, ಫುಟಬಾಲ್ ತಂಡಗಳು ಭಾಗವಹಿಸಿದ್ದವು. ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಫುಟಬಾಲ್ ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಸಂಘಟಕರು ಆಯೋಜನೆ ಮಾಡಿದ್ದಾರೆ.
ಇಂದಿನ ಪಂದ್ಯವಾಳಿಯಲ್ಲಿ ಬೆಂಗಳೂರು ತಂಡವು ಬೆಳಗಾವಿಯ ವಿರುದ್ಧ ೧-೦ ಪಡೆದುಕೊಂಡು ಬೆಂಗಳೂರು ತಂಡವು ೧ ಗೊಲನಿಂದ ಗೆಲ್ಲವು ಸಾಧಿಸಿದೆ,ಕೋಲ್ಹಾಪೂರ ತಂಡವು ರಾಯಬಾಗ ವಿರುದ್ಧ ೦೫-೦ ದಿಂದ ಕೋಲ್ಹಾಪೂರ ತಂಡವು ೫ ಗೊಲನಿಂದ ರೋಚಕ ಗೆಲ್ಲವು ಸಾಧಿಸಿದೆ, ಮುಂಬೈ ತಂಡವು ಗಡಿಹಿಂಗ್ಲಜ್ ವಿರುದ್ಧ ೦೪-೦೧ ಗೊಲಿನಿಂದ ಮುಂಬೈ ತಂಡವು ೦೩ ಗೊಲನಿಂದ ಗೆಲ್ಲವು ಸಾಧಿಸಿದೆ. ಕೊಡಗು ತಂಡವು ನಿಪ್ಪಾಣಿಗಳ ವಿರುದ್ಧ ಸಾಯಂಕಾಲದವರೆಗೆ ನಡೆದಿತ್ತು. ರಾಷ್ಟ್ರಮಟ್ಟದ ಫುಟಬಾಲ್ ನಿರ್ಣಾಯಕರಾದ ಇಬ್ರಾಹಿಮ್, ದರ್ಶನ, ಶಾಮ ಸುಂದರ, ಅನೀಲ ಸೇರಿದಂತೆ ೪೦೦ ನೂರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಪಾಲ್ಗೋಂಡಿದ್ದರು.

ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳಿಗಾಗಿ ವಿಶೇಷ ನಂದಿ ಕ್ಷೀರ ಮಳಿಗೆ, ಬುಕ್ಕ ಸ್ಟಾಲ್, ಸಾವಯವ ಆಹಾರ ಮಳಿಗೆ, ಶಿಕ್ಷಣ ಸಂಸ್ಥೆಗಳು ವಿಶೇಷ ಮಾಹಿತಿ ಕೇಂದ್ರ ಕ್ರೀಡಾ ಅಭಿಮಾನಿಗಳ ಆಕರ್ಷಣೆವಾಗಿತ್ತು.
ರಾಷ್ಟ್ರಮಟ್ಟದ ಫುಟಬಾಲ್ ಪಂದ್ಯಾವಳಿಯ ವೇದಿಕೆಯ ಮೇಲೆ ಜೆ. ಆರ್. ಜಾಧವ, ಕೊಳಚೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಅಶೋಕ ಆಸೋದೆ, ಪಟ್ಟಣ ಪಂಚಾಯತ ಅಧ್ಯಕ್ಷ ಮಹಾದೇವ ಪಡೋಳಕರ, ರಾಜು ಬಣಗೆ, ನವೀಣ ಪಟೇಕರಿ, ಅಜೀತ ದಂಡಾಪುರೆ, ಸುಜೀತ ಪೂಜೇರಿ, ಅಜೀತ ಪಾಟೀಲ, ತಮ್ಮಣ್ಣ ವಡ್ಡರ, ಅಕ್ಷಯ ಸೌದಲಗಿ, ಸಂಜು ಸೌದಲಗಿ ತಮ್ಮಣ್ಣ ವಡ್ಡರ, ರಾಜು ಶಿಂಧೆ, ವಿಶ್ವನಾಥ ಪಾಟೀಲ, ರಮೇಶ ಪಾಟೀಲ, ಅಮೀತ ಚೌಗಲಾ, ಆದರ್ಶ ಪೂಜೇರಿ, ಅಕ್ಷಯ ಸೌದಲಗಿ, ಶ್ರೀಶೈಲ ಪಾಟೀಲ, ಕುಮಾರ ಹಾರೂಗೇರಿ ಭೀಮು ಬಣಗೆ, ಅಂತು ಬಣಗೆ, ಮಹಾವೀರ ಕೋಳಿ, ಸಂಭಾ ಶಿಂಧೆÉ, ವಿಶ್ವನಾಥ ಜಲಾಲಪುರೆ, ಅಜೀತ ಘೋಗಡಿ, ದಿಗ್ವಿಜಯ ದೇಸಾಯಿ ಹಾಗೂ ತಂಡದವರು ಉಪಸ್ಥಿತರಿದ್ದರು


Spread the love

About fast9admin

Leave a Reply

Your email address will not be published. Required fields are marked *