ಚಿಂಚಲಿ ಪಟ್ಟಣದಲ್ಲಿ ಕುಡಚಿ ಪೊಲೀಸ್ ಠಾಣೆ ಹಾಗೂ ಗೃಹ ರಕ್ಷಕ ದಳ ಇಲಾಖೆಯಿಂದ ಕೊರೊನಾ ಜಾಗೃತಿ ಜೊತೆ ಮಾಸ್ಕ ವಿತರಣೆ
ಚಿಂಚಲಿ: ಸಾರ್ವಜನಿಕರು ಮಾಸ್ಕ್ ಧರಿಸುವ ಬಗ್ಗೆ ಇನ್ನೂ ಅಸಡ್ಡೆ ತೋರುತ್ತಿರುವುದರಿಂದ ದಿನೇದಿನೆ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ 2ನೇ ಅಲೆಯಿಂದಾಗಿ ಮತ್ತೆ ಹೆಚ್ಚಾಗಿದೆ. ಇಷ್ಟಾದರೂ ಜನ ಇನ್ನೂ ಸಹ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವುದರಿಂದ ಸೋಂಕು ಹೆಚ್ಚಾಗಿದೆ. ಇನ್ನಾದರು ನಾವುಗಳು ಜಾಗೃತಿ ವಹಿಸಿದ್ದರೆ ಮಾತ್ರ ಕೊರೋನಾ ಸೋಂಕು ತಡೆಯಲ್ಲು ಸಾಧ್ಯ ಸಾರ್ವಜನಿಕರು ಅಧಿಕಾರಿಗಳಿ ಸಹಾಯ ಸಹಕಾರ ನೀಡಿ ತಾವುಗಳು ಮನೆಯಲ್ಲಿ ಆರೋಗ್ಯವಾಗಿರಿ ಎಂದು ಎ ಎಸ್ ಐ ಡಿ. ಎಸ್ ಗೊಂದಳಿ ಹೇಳಿದರು.
ಅವರು ಚಿಂಚಲಿ ಪಟ್ಟಣದಲ್ಲಿ ಕುಡಚಿ ಪೋಲಿಸ್ ಠಾಣೆ ಹಾಗೂ ಗೃಹ ರಕ್ಷಕ ದಳ ಸಂಯೋಗದಲ್ಲಿ ಆಯೋಜಿಸಿದ “ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಹಾಗೂ ಸಾರ್ವಜನಿಕರಿಗೆ ಮಾಸ್ಕ ವಿತರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಬೇಕು ಎಂದು ಅರಿವು ಮೂಡಿಸುವ ಜೊತೆಗೆ ಮಾಸ್ಕ್ ಇಲ್ಲದೆ ಬಂದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಲಾಯಿತು. ಮತ್ತು ಈಗಾಗಲೇ ಕೊರೊನಾ ಹೆಚ್ಚಾಗುತ್ತಿದೆ. ಇದರಿಂದ ಮನೆಯಿಂದ ಅನಾವಶ್ಯಕವಾಗಿ ಹೊರ ಬಾರದೆ, ರೋಗದಿಂದ ದೂರವಿರಿ ಎಂದು ಎ ಎಸ್ ಐ ಗೊಂದಳ್ಳಿ ಮನವಿ ಮಾಡಿಕೊಂಡರು.
ಬಾಯಿ ಹಾಗೂ ಮೂಗು ಮುಚ್ಚದೆ ಇರುವವರಿಗೆ ಸರಿಯಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದರು. ನಂತರ ಕೆಲವರಿಗೆ ಮಾಸ್ಕ್ ನೀಡಿದರು. ಪೊಲೀಸ್ ಇಲಾಖೆಯವರು ಮಾಸ್ಕ್ ಇಲ್ಲದೆ ರಸ್ತೆಗಿಳಿದವರಿಗೆ ಹಾಗೂ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿದರು. ಬೈಕ್ ಸವಾರರು ಮಾಸ್ಕ್ ಇಲ್ಲದೆ ಬರುವವರನ್ನು ತಡೆದು ದಂಡ ವಿಧಿಸಿ, ರಶೀದಿ ನೀಡಿ ಹಣ ಪಡೆಯುತ್ತಿದ್ದರು. ಕೆಲವರು ಮಾಸ್ಕ್ನ ಬೈಕ್ನೊಳಗೆ ಇಟ್ಟ ಕಾರಣ ಪೊಲೀಸರಿಗೆ ದಂಡ ಕಟ್ಟಿದರು.
ಈ ಸಂದರ್ಭದಲ್ಲಿ ಎ ಎಸ್ ಐ. ಎಚ್ ಡಿ ಭೋಜನ್ನವರ. ದೀನಕರ ಹುದ್ದಲಿ, ಸಿದ್ದು ಪಾಟೀಲ, ಸುಮತ ಸೂರ್ಯವಂಶಿ, ಕಿರಣ ಮದಹಳ್ಳಿ, ಪ್ರದೀಪ ಕುರಣೆ, ರಾಜು ಹಾರೂಗೇರಿ, ರವಿ ಅಥಣಿ, ಹಾಗೂ ಪಟ್ಟಣ ಗೃಹ ರಕ್ಷಕ ದಳ ಸಿಬ್ಬಂದಿಗಳು ಉಪಸ್ಥಿತರಿದ್ದರು.