ಮುರಗೋಡ ಡಿಸಿಸಿ ಬ್ಯಾಂಕ್ ಲೂಟಿಕೊರರ ಬಂಧನ
ಯರಗಟ್ಟಿ: ಮುರಗೋಡ ಡಿಸಿಸಿ ಬ್ಯಾಂಕ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ ಪೋಲಿಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು ಅವರಿಂದ ನಗದು ಆಭರಣವನ್ನು ಜಪ್ತಿ ಮಾಡಿದ್ದಾರೆ.
ಬಂಧಿತರಿಂದ 4,20,98,400/-ರೂ ನಗದು 1,63,72,220/-ರೂ ಕಿಮ್ಮತ್ತಿನ 3 ಕೆ ಜಿ 149.26 ಗ್ರಾಂ ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರು ಮತ್ತು ಮೋಟಾರ ಸೈಕಲ್ ನ್ನು ಜಪ್ತ ಮಾಡಿದ್ದಾರೆ.
ಪ್ರಕರಣ ಕುರಿತು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಪ್ರಮೋದ ಕೃಷ್ಣಪ್ಪ ಯಲಿಗಾರ ನೀಡಿದ ದೂರಿನನ್ವಯ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು ಹೆಚ್ಚುವರಿ ಎಸ್.ಪಿ ಮಹಾನಿಂಗ ನಂದಗಾಂವಿ, ಡಿಎಸ್ ಪಿ ರಾಮನಗೌಡ ಹಟ್ಟಿ, ಪೊಲೀಸ್ ಇನ್ಸಪೆಕ್ಟರ ಮೌನೇಶ್ವರ ಮಾಲಿ ಪಾಟೀಲ, ಪೊಲೀಸ್ ಇನ್ಸಪೆಕ್ಟರ
ಯು.ಎಚ್ ಸಾತೇನಹಳ್ಳಿ ಸವದತ್ತಿ ಪಿಎಸ್ ಐ ಶಿವಾನಂದ ಗುಡಗನಟ್ಟಿ, ಮುರಗೋಡ ಪಿಎಸ್ ಐ ಪ್ರವೀಣ ಗಂಗೋಳ್ಳಿ, ರಾಮದುರ್ಗ ಪಿಎಸ್ ಐ ಶಿವಾನಂದ ಕಾರಜೋಳ, ಬಸಗೌಡ ಎಸ್ ನೇರ್ಲಿ, ಚಾಂದಬೀ ಗಂಗಾವತಿ ಮತ್ತು ಟೆಕ್ನಿಕಲ್ ಸೆಲ್ ಸಿಬ್ಬಂಧಿ ಜನರು ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂಧಿ, ಮುರಗೋಡ ಪೊಲೀಸ ಠಾಣೆಯ ಸಿಬ್ಬಂದಿ ಸೇರಿದಂತೆ 4 ತಂಡಗಳನ್ನು ರಚಿಸಿದ್ದು ಸದರಿ ತಂಡಗಳು ಸದರಿ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣದಲ್ಲಿ ಭಾಗಿ ಆದ 3 ಜನ ಆರೋಪಿ 1] ಬಸವರಾಜ ಸಿದ್ಧಿಂಗಪ್ಪ ಹುಣಶೀಕಟ್ಟಿ ವಯಾ: 30 ವರ್ಷ, ಸಾ: ತೋರಣಗಟ್ಟಿ ತಾ: ರಾಮದುರ್ಗ (ಕ್ಲರ್ಕ ಡಿ.ಸಿ.ಸಿ.ಬ್ಯಾಂಕ ಮುರಗೋಡ) 2] ಸಂತೋಷ ಕಾಳಪ್ಪ ಕಂಬಾರ ವಯಾ: 31 ವರ್ಷ ಸಾ: ಯರಗಟ್ಟಿ 3] ಗಿರೀಶ @ ಯಮನಪ್ಪ ತಂದೆ ಲಕ್ಷ್ಮಣ ಬೆಳವಲ 26 ವರ್ಷ ಸಾ: ಜೀವಾಪೂರ ತಾ: ಸವದತ್ತಿ ಇದ್ದು ಸಧ್ಯ ಇವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
ವರದಿ : ಈರಣ್ಣಾ ಹುಲ್ಲೂರ ಯರಗಟ್ಟಿ