ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ
ಡಾ
. ಬಿ ಅರ್ ಅಂಬೇಡ್ಕರ್ ಅವರ 64 ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ಇಂದು ಭೀಮ್ ಆರ್ಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಗಳ ನೇತೃತ್ವದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಬಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ 64 ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಸುನಿಲ ಕೊಟಬಾಗಿ ಹಾಗೂ ಅಂಬೇಡ್ಕರ್ ವಾದಿ ಪ್ರಭಾಕರ ಮುಗಳಿ, ಹಾಗು ಭೀಮ್ ವಾದಿ ಸಂತೋಷ ದೊಡಮನಿ, ಗೋಕಾಕ ತಾಲೂಕಾ ಪ್ರಧಾನ ಕಾರ್ಯದರ್ಶಿ ಸುನಿಲ ಈರಗಾರ, ವಿನೋದ ಮೇತ್ರಿ, ಆನಂದ ಗಾಡಿವಡ್ಡರ, ಸಂಘಟನೆಯ ಕಾರ್ಯಕರ್ತರಾದ ಪ್ರಜ್ವಲ, ರಮೇಶ, ನಾಗರಾಜ, ಸದ್ದಾಮ, ಕಿರಣ್, ಶಂಕರ, ಪ್ರಮೋದ್, ರಂಜಾನ, ಆಸಿಪ್ ಮತ್ತು ಗ್ರಾಮದ ಸಮಸ್ತ ಗುರು ಹಿರಿಯರು ಉಪಸ್ಥಿತರಿದ್ದರು
Fast9 Latest Kannada News