ಘಟಪ್ರಭಾದಲ್ಲಿ ಈದ್ ಮಿಲಾದ್: ಶಾಂತಿಯುತ, ಸಂಭ್ರಮದ ಮೆರವಣಿಗೆ,ಎಲ್ಲೆಲ್ಲೂ ಹಾರಾಡಿದ ಬಾವುಟಗಳು ಮಠಾಧೀಶರು ಬಾಗಿ
ಘಟಪ್ರಭಾ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಮರು ಶನಿವಾರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ವಿವಿಧೆಡೆ ಹಸಿರು ಧ್ವಜಗಳು, ಬಾವುಟಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಪೈಗಂಬರರ ಕುರಿತ ಗುಣಗಾನ ಮಾಡಿದರು. ಮಕ್ಕಳು ಬಣ್ಣ, ಬಣ್ಣದ ಉಡುಪು ಧರಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಗುಂಬಜ್ ಪ್ರತಿಕೃತಿಗಳು ಗಮನ ಸೆಳೆದವು.
ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಸಂಭ್ರಮ, ಸಡಗರಗಳಿಂದ ಭಾಗವಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡೂ ಕಡೆ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿಕೊಂಡರು.
ಮೆರವಣಿಗೆ ಯುದ್ದಕೂ ಕೆಲವರು ಪಾನಕ, ಸಿಹಿ ಹಾಗೂ ಹಣ್ಣುಗಳು ಕುಡಿಯುವ ನೀರಿನ ಬಾಟಲಗಳು ವಿತರಣೆ ಮಾಡಿದರು.
ಮೆರವಣಿಗೆಯಲ್ಲಿ ವಿವಿಧ ಹಳ್ಳಿಗಳಿಂದ ಮುಸ್ಲಿಂ ಯುವಕರು ಭಾಗವಿಸಿದ್ದರು.ಮೆರವಣಿಗೆ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರು ಸಹ ಭಾಗವಹಿಸಿದ್ದರು.
ಗುಬ್ಬಲ ಗುಡ್ಡ ಮಠದ ಅಂದಾನಿ ದೇವರು ಮಾತನಾಡಿ ಈದ್ ಮಿಲಾದ್ ಅಂಗವಾಗಿ ಬೆಳಗ್ಗೆ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣುಹಂಪಲುಗಳು ನೀಡಿ ಆರೈಕೆ ಮಾಡಿದ್ದು ನಿಮ್ಮ ಕಾರ್ಯ ಶ್ಲಾಘನೀಯ. ಘಟಪ್ರಭಾದಲ್ಲಿ ಈ ಭಾವನೆ ಎಲ್ಲರಲ್ಲಿಯೂ ಮೂಡಿ ಬರಲಿ ಹಾಗೂ ಕಾರ್ಯಕ್ರಮಗಳಲ್ಲಿ ಭೇದ ಭಾವನೆ ಬರದೆ ಸದಾಕಾಲ ಹೀಗೆ ಅನ್ಯೋನ್ಯತೆ ಇರಲಿ ಗುರುಗಳ ಆಶೀರ್ವಾದ ನಿಮ್ಮ ಮೇಲೆ ಸದಾಕಾಲ ಇರುತ್ತೆ ಹಾಗೂ ಈದ್ ಮಿಲಾದ್ ಹಬ್ಬ ಮುಂದಕ್ಕೆ ಹಾಕಿ ಗಣೇಶ ಹಬ್ಬದ ವಿಸರ್ಜನೆಗೆ ಅವಕಾಶ ಮಾಡಿ ಕೊಟ್ಟು ಹಿಂದೂ ಬಾಂದವರಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಿರಿ ಎಂದು ಹೇಳಿದರು.
ಹಿರಿಯರಾದ ಸುರೇಶ ಪಾಟೀಲ ಮಾತನಾಡಿ ಹಿಂದೂ ಮುಸ್ಲಿಂರು ನಾವು ಅಣ್ಣ ತಮ್ಮಂದಿರು ಎಂದು ಬಾಳತಾ ಇದ್ದಿವಿ ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲದೆ ಅವರ ಮೆರವಣಿಗೆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿ ನಮ್ಮ ಹಬ್ಬದ ಮೆರವಣಿಗೆಯಲ್ಲಿ ಅವರು ಸಹ ಭಾಗವಹಿಸುತ್ತಾರೆ,ಸುಮಾರು 40-50 ವರ್ಷಗಳಿಂದ ಒಳ್ಳೆಯ ಸ್ನೇಹ ಸಂಬಂಧ ಇಟ್ಟು ಕೊಂಡು ಬಂದಿದ್ದೇವೆ. ಇದೇ ತರ ಮುಂದೆಯೂ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾವು ಎಲ್ಲರೂ ಸೇರಿ ಹಬ್ಬಗಳು ಆಚರಿಸುತ್ತ ಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಠಾಣೆಯ ಪಿ ಐ ಬಸವರಾಜ ಕಾಮನಬೈಲು,ಹಿರಿಯರಾದ ಡಿ ಎಮ್ ದಳವಾಯಿ ಮಾಹಲಿಂಗ ಹಳ್ಳೂರ, ಪತ್ರಕರ್ತರಾದ ಜಿ ಎಸ್ ರಜಪೂತ, ಮುಸ್ಲಿಂ ಸಮಾಜದ ಹಿರಿಯರಾದ ಶೌಕತಲಿ ಕಬ್ಬೂರ, ಚಿರಾಕಲಿ ಮಕಾನದಾರ,ಕಬೀರ ಕಬ್ಬೂರ,ಸಲೀಂ ಕಬ್ಬೂರ,ಮೃತುಜಾ ಮಕಾನದಾರ,ಹಾಗೂ ಜಾಮೀಯಾ ಮಸೀದಿಯ ಸರ್ವ ಸದಸ್ಯರು,ಪೋಲಿಸ್ ಸಿಬ್ಬಂದಿಗಳು,ಹಾಗೂ ಇನ್ನೂ ಅನೇಕ ಮುಸ್ಲಿಂ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.