ಚಿಂಚಲಿ ಪಟ್ಟಣದಲ್ಲಿ ಮಾಸ್ಕ್ ಧರಿಸದಿದ್ದಕ್ಕೆ 100 ರೂ ದಂಡ !
ಚಿಂಚಲಿ: ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆಂದ್ದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೇಂಕಟೇಶ್ವರ ಬಳ್ಳಾರಿ ಹೇಳಿದರು.
ಕೊರೋನಾ ಬರದಂತೆ ಎಚ್ಚರ ವಹಿಸಲು ಮಾಸ್ಕ್ ಹಾಕಿಕೊಳ್ಳಿ ಎಂದು ಪಟ್ಟಣದಲ್ಲಿ ಎಷ್ಟೇ ಎಚ್ಚರಿಕೆ ಮಾತು ಹೇಳಿದರೂ ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಜನರುಬಿಂದಾಸ್ ಆಗಿದ್ದಾರೆ ಹೀಗಾಗಿ ಅನಿವಾರ್ಯವಾಗಿ ಮಾಸ್ಕ್ ಧರಿಸದವರನ್ನು ಹಿಡಿದು ಅವರುಗಳಿಗೆ ಸೋಂಕಿನ ಬಗ್ಗೆ ಅರಿವು ಮೂಡಿಸಿ ರೂ.100 ದಂಡ ವಸೂಲಿ ಮಾಡುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಜು ನಿಂಗನೂರೆ, ಲಕ್ಷ್ಮಣ ಕೋಳಿಗುಡ್ಡೆ, ಹಾಗೂ ಕುಡಚಿ ಪೋಲಿಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.