ಸ್ಪರ್ಧಾತ್ಮಕ ಯುಗದಲ್ಲಿ ಗಮನವಿಟ್ಟು ಓದಿದ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ- ರಶ್ಮಿ ಕರೆಪ್ಪಗೋಳ
- ಘಟಪ್ರಭಾ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಮನವಿಟ್ಟು ಓದಿದ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ ಎಂದು ಹುಬ್ಬಳ್ಳಿಯ ಕೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ ಎಸ್ ಸಿ ವಿದ್ಯಾರ್ಥಿನಿ ಹಾಗೂ ಮಾಧ್ಯಮಿಕ ಶಾಲೆಯ ಹಳೆ ವಿದ್ಯಾರ್ಥಿನಿ ರಶ್ಮಿ ಕರೆಪ್ಪಗೋಳ ಅವರು ಸಮೀಪದ ಶಿಂದಿಕುರಬೇಟ ಮಾಧ್ಯಮಿಕ ಶಾಲೆಯಲ್ಲಿ “ಹಳೆಯ ಬೇರು ಹೊಸ ಚಿಗುರು” ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ಹೆಚ್ಚಿನ ಅಂಕ ಪಡೆಯುವ ಮೂಲಕ ಉನ್ನತ ವ್ಯಾಸಂಗಕ್ಕೆ ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಸಾಧನೆ ಮುಖ್ಯವಲ್ಲ ಸಾಧಿಸುವ ಛಲ ಮುಖ್ಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿನಿ ಕುಮಾರಿ ರಶ್ಮಿ ಕರೇಪ್ಪಗೋಳ ಇವರನ್ನು ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್.ಗೋಸಬಾಳ, ಕೆ.ವಿ.ಕಡ್ಡಿ, ಎಂ.ಎಸ್.ಬೆಳಗಲಿ, ಎಸ್.ಎನ್.ವಡರಟ್ಟಿ, ಆರ್.ವೈ.ಬೆಳಗಲಿ, ಆರ್.ಬಿ.ಕರೆಪ್ಪಗೋಳ, ಶಿಕ್ಷಕಿ ಪಾಟೀಲ ಹಾಗೂ ಬಿಸಿಯೂಟ ಅಡುಗೆ ಸಿಬ್ಬಂದಿ ಸನ್ಮಾನಿಸಿದರು.