ಗೋಕಾಕ ಸಾರಿಗೆ ಸಿಬ್ಬಂದಿಗಳ ಪ್ರತಿಬಟನೆ : ನಿಲ್ದಾಣದಲ್ಲಿ ಅಡುಗೆ ಮಾಡಿ ಊಟ
ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಗೋಕಾಕದಲ್ಲಿ ಬಸ್ಸುಗಳನ್ನು ಬಂದ್ ಮಾಡಿ
ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಲಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ .ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವ ಸಲುವಾಗಿ ಪ್ರತಿಬಟನೆ ಮಾಡುತಿದ್ದು
ನಮ್ಮ ಬೇಡಿಕೆ ಈಡೆರಿಸದೆ ಈಗಾಗಲೆ ಸರಕಾರ ನಮ್ಮನ್ನು ಬೀದಿಗೆ ತಂದಿರಬೇಕಾದರೆ ಬೀದಿಯಲ್ಲಿ ಊಟ ಮಾಡುತಿದ್ದೇವೆ,ಅದಕ್ಕಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ 500 ಜನ ಸಾರಿಗೆ ಸಿಬ್ಬಂದಿಗಳಿಗೆ ನಿಲ್ದಾಣದಲ್ಲಿ ಸ್ವಯಂ ಅಡುಗೆ ಮಾಡಿ ಊಟ ಮಾಡಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲ ಸಾರಿಗೆ ಸಿಬ್ಬಂದಿಗಳು ಉಪಸ್ಥಿತರಿದ್ದು ನಮ್ಮ ಬೇಡಿಕೆ ಈಡೆರುಸುವ ತನಕ ಪ್ರತಿಬಟನೆ ಹಿಂದೆ ತೆಗೆದುಕೊಳ್ಳುವುದಲ್ಲ ಅಂತ ಅಗ್ರಹಿಸಿದರು.
ಬಸ್ಸುಗಳನ್ನು ಬಂದ್ ಮಾಡಿದ್ದರಿಂದ ಪರ ಊರಿಗೆ ಹೋಗಬೇಕಾಗಿದ್ದ ಸಾರ್ವಜನಿಕರು ಪರದಾಡುವಂತಾಯಿತು.
Check Also
ಈ ಜಗತ್ತು ನಿಂತಿರುವುದೇ ದೇವರಿಂದ* *ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ*
Spread the love*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ* *ಈ ಜಗತ್ತು ನಿಂತಿರುವುದೇ …