Breaking News
????????????????????????????????????

ಪಕ್ಷಕ್ಕಾಗಿ ಯುವಕರು ಶ್ರಮಿಸಿ, ಸಂಘಟನೆಯತ್ತ ಒಲವು ತೋರಲಿ-ಡಾ: ಬಾಳಿಕಾಯಿ

Spread the love

ಗೋಕಾಕ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿಯ ನಾಯಕತ್ವದಿಂದ ಇಡೀ ಪ್ರಪಂಚವೇ ನಮ್ಮ ರಾಷ್ಟ್ರದತ್ತ ನೋಡುತ್ತಿದೆ, ಹೀಗಾಗಿ ಮೋದಿ ಅವರು ಪ್ರಪಂಚದ ಶಕ್ತಿಶಾಲಿ ಪ್ರಧಾನಿಯಾಗಿದ್ದಾರೆ. ರಾಷ್ಟ್ರದ ಉದ್ದಗಲಕ್ಕೂ ಬಿಜೆಪಿ ಬೇರೂರಿದ್ದು, ರಾಷ್ಟ್ರದ ಸಮಗ್ರ ಪ್ರಗತಿ ಅದು ಬಿಜೆಪಿಯಿಂದ ಮಾತ್ರವೇ ಸಾಧ್ಯವೆಂದು ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ: ಮಲ್ಲಿಕಾರ್ಜುನ ಬಾಳಿಕಾಯಿ ತಿಳಿಸಿದರು.
ಶುಕ್ರವಾರದಂದು ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಯುವ ಮೋರ್ಚಾ ಅರಭಾವಿ ಮಂಡಲದ ಕಾರ್ಯಕಾರಣ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಈ ಪಕ್ಷದ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಂಘಟನೆಯತ್ತ ಯುವಕರು ಒಲವು ತೋರುವಂತೆ ತಿಳಿಸಿದರು.
ಬಿಜೆಪಿ ತತ್ವಾಧಾರಿತ ಪಕ್ಷವಾಗಿದ್ದು, ಬೇರೆ ಪಕ್ಷಗಳಿಂತ ತೀರ ವಿಭಿನ್ನವಾಗಿದೆ. ಪಕ್ಷದ ಪದಾಧಿಕಾರಿಗಳು ತೋರಿಕೆಗಷ್ಟೇ ಮೀಸಲಾಗದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಡುವಂತೆ ಸಂಘಟನೆಯ ಮೂಲಕ ನಮ್ಮಲ್ಲಿರುವ ಸಾಮಥ್ರ್ಯವನ್ನು ತೋರಿಸುವಂತೆ ಹೇಳಿದ ಅವರು, ಜವಾಬ್ದಾರಿಯನ್ನರಿತು ಶಿಸ್ತು ಬದ್ಧವಾಗಿ ಶ್ರಮಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ದುಂಡಪ್ಪ ನಂದಗಾಂವಿ, ಸತೀಶ ಹೂಗಾರ, ಜಿಲ್ಲಾ ಕಾರ್ಯದರ್ಶಿ ಗುರು ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
.


Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *