ಗೋಕಾಕದಲ್ಲಿ ಮರಾಠಾ ಸ್ಮಶಾನದಲ್ಲಿ ಇವತ್ತು ಮಹಾಪರಿನಿರ್ವಾಣ ದಿನ ಆಚರಣೆ ಮಾಡಲಿಕ್ಕೆ ಕಾರಣ ಎಂದರೆ ಕೆಲವು ವರ್ಷಗಳ ಹಿಂದೆ ನನಗೆ ಈ ಸ್ಮಶಾನದಲ್ಲಿ ಊಟ ಮಾಡಿಸಿದ್ದರೆಂದು ಕೆ,ಪಿ,ಸಿ,ಸಿ,ಕಾರ್ಯದಕ್ಷ ಸತೀಶ ಜಾರಕಿಹೋಳಿಯವರು ಮಾತನಾಡಿ
ಕಳೆದ ಆರು ವರ್ಷಗಳಿಂದ ಈ ಪ್ರಯತ್ನ ಮಾಡುತಿದ್ದೇವೆ, ನಮ್ಮ ಪಾಲಿಗೆ ಬದುಕಲು ನಮ್ಮ ಪಾಡಿಗೆ ಬಿಡುವುದಕ್ಕಾಗಿ ನಮ್ಮ ಹೋರಾಟ, ಅದಕ್ಕಾಗಿ ಬಾಬಾ ಸಾಹೇಬರ ಶಕ್ತಿಯಿಂದ ನಮಗೆ ಪರಿವರ್ತನೆ ಆಗುವ ಶಕ್ತಿ ಬಂದಿದೆ, ನಾವು ನಂಬಿಕೆ ವಿರೋದಿಗಳಲ್ಲ ಮೂಡ ನಂಬಿಕೆ ವಿರೋದಿಗಳು, ಮೂಎ ನಂಬಿಕೆ ವಿರೋದ ಮಾಡುವುದೆ ಈ ಕಾರ್ಯಕ್ರಮದ ಉದ್ದೇಶ,
ನಾವು ಯಾರನ್ನು ಪೂಜೆ ಮಾಡಬೇಕೊ ಅವರನ್ನು ನಾವು ಪೂಜೆ ಮಾಡುತ್ತಿಲ್ಲ,
ನಮ್ಮ ಸಲುವಾಗಿ ತಮ್ಮ ಜೀವನವನ್ನೆ ತ್ಯಾಗ ಮಾಡಿದ ಪೂಜ್ಯರನ್ನು ನಾವು ಪೂಜಿಸುತ್ತಿಲ್ಲ.
ನಾವು ಬುದ್ದ ,ಬಸವ, ಅಂಬೇಡ್ಕರ, ಶಿವಾಜಿ ಮಹಾರಾಜರ ವಿಚಾರಗಳನ್ನು ಮಾತ್ರ ಹೇಳುತ್ತಿದ್ದೇವೆ, ಇನ್ನು ಎಷ್ಟೊ ಘಟನೆಗಳನ್ನು ಮುಚ್ಚಿ ಇಟ್ಟಿರುತ್ತಾರೆ, ನಮ್ಮ ವಸ್ತುಗಳನ್ನು ನಮಗೆ ಉಪಯೋಗ ಮಾಡದೆ ಇನ್ನೊಬ್ಬರಿಗಾಗಿ ಉಪಯೋಗಿಸುತಿದ್ದಾರೆ, ಜನರಿಗೆ ತಿಳುವಳಿಕೆ ಮಾಡುವ ಕಾರ್ಯಕ್ರಮವನ್ನು ಮಾನವ ಬಂದುತ್ವ ವೇದಿಕೆ ಮಾಡುತ್ತಾ ಬಂದಿದೆ,
ಯಾರು ವಿರೋದ ಮಾಡುತ್ತಾರೋ ಅಂತವರ ದೇವಸ್ಥಾನಗಳನ್ನು ಕಟ್ಟಿಸುತ್ತಾರೆ ಮತ್ತು ಬಸವಣ್ಣನವರ ವಿಚಾರಗಳನ್ನು ಅಂಬೇಡ್ಕರ ರವರು ಸಂವಿದಾನ ಮುಲಕ ತಿಳಿಸಿದ್ದಾರೆ, ಯಾರೊ ಬಂದೊ ಸಂವಿದಾನ ತಿದ್ದುಪಡಿ ಮಾಡಲಿಕ್ಕೆ ಬಂದಿದ್ದಾರೆ ಅದನ್ನ ತಿಳಿಕೊ ಶಕ್ತಿ ನಿಮ್ಮಲ್ಲಿದೆ ಎಂದರು, ವಿಶೇಷವಾಗಿ ಮಹಿಳೆಯರಿಗೆ ಗಂಡಸರಷ್ಟು ಹಕ್ಕು ಅಂಬೇಡ್ಕರ ಸಂವಿದಾನ ಮೂಲಕ ನೀಡಿದ್ದಾರೆ, ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದರು.