ಬೆಳಿಗ್ಗೆ 8.00 ಗಂಟೆಯಿಂದ ಗ್ರಾ.ಪಂ.ಚುನಾವಣೆಯ ಮತ ಎಣಿಕೆ ಪ್ರಾರಂಭ – ಪ್ರಕಾಶ ಹೊಳೆಪ್ಪಗೋಳ
ಗೋಕಾಕ : ನಾಳೆ ಬೆಳಿಗ್ಗೆ 8.00 ಗಂಟೆಗೆ ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಾರಂಭವಾಗುವುದು. Covid ಇರುವ ಕಾರಣ ಅಭ್ಯರ್ಥಿ ಅಥವಾ ಏಜೆಂಟ್ ಒಬ್ಬರಿಗೆ ಮಾತ್ರ ಒಳಗೆ ಅವಕಾಶ ಇದೆ. ಎಣಿಕೆ ಕೊಠಡಿಯ ಒಳಗೆ ಮೊಬೈಲ್, ನೀರಿನ ಬಾಟಲ್, ಯಾವುದೇ ದ್ರವ ವಸ್ತು, ಗುಟ್ಕಾ, ಪಾನ, ಸಿಗರೇಟ್ , ಕಡ್ಡಿ ಪೊಟ್ಟಣ, ಬ್ಲೇಡ್ ಅಥವಾ ಹರಿತವಾದ ವಸ್ತು, ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲ. ಸಂಪೂರ್ಣ ನಿಷೇಧ ಇರುತ್ತದೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಗೋಕಾಕ ತಹಶೀಲ್ದಾರರಾದ ಪ್ರಕಾಶ ಹೊಳೆಪ್ಪಗೋಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
3 ಸುತ್ತಿನಲ್ಲಿ ಮತ ಎಣಿಕೆ ಜರುಗುವುದು. ಸುತ್ತು ವಾರು (Round wise) ಪಂಚಾಯತಿಗಳ ವಿವರ ಪ್ರತಿ ಸುತ್ತಿನಲ್ಲಿ ಆ ಸುತ್ತಿ ಗೆ ಸಂಭಂದಪಟ್ಟ ಪಂಚಾಯತಿಗಳ ಅಭ್ಯರ್ಥಿ ಅಥವಾ ಏಜೆಂಟ್ ಗಳಿಗೆ ಮಾತ್ರ ಒಳಗೆ ಅವಕಾಶ ಇದೆ.
ಅಭ್ಯರ್ಥಿ ಅಥವಾ ಏಜೆಂಟ್ ಗಳಿಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಯ್ದು ಕಾಲೇಜ್ ಆವರಣ ಪ್ರವೇಶಿಸಲು ಅವಕಾಶ ಮಾಡಲಾಗಿದೆ, ಅಲ್ಲಿಂದಲೇ ಬರತಕ್ಕದ್ದು. ಪಾರ್ಕಿಂಗ್ ವ್ಯವಸ್ಥೆ ಯನ್ನ ಜಿನ್ನಿಂಗ್ ಮಿಲ್ಲ ಗ್ರೌಂಡ್ ಹಾಗೂ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾಡಲಾಗಿದೆ ಎಂದು ಸಹ ತಿಳಿಸಿದ್ದಾರೆ.