ಕುಖ್ಯಾತ ಮನೆಗಳ್ಳರ ಬಂಧನ,ಅಪಾರ ಪ್ರಮಾಣದ ಚಿನ್ನಾಭರಣ ವಶ, ಸ್ಥಳಿಯರಿಂದ ಶ್ಲ್ಯಾಘನೀಯ ವ್ಯಕ್ತ

ಗೋಕಾಕ : ನಗರದ ಪೊಲೀಸರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ರೂ 12. ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಶಹರ ಸಿಪಿಆಯ್ ಆರ್,ಬಿ, ಸುರೇಶಬಾಬು ಹೇಳಿದರು.
ಅಕ್ಟೋಬರ 31 ಹಾಗೂ ನವೆಂಬರ 1 ರಂದ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಕೇಶವಪೂರ ಮೂಲದ ನಂದೀಶ ಹನುಮಂತಪ್ಪ ಸಕ್ತನವರ,ನವೀನ ಅಶೋಕ ಮುಂಡರಗಿ,ರಮೇಶ ಶಂಕರಪ್ಪ ಅಗಡಿ ಇವರು ಗೋಕಾಕ ನಗರದ ಸಚೀನ ಅಶೋಕ ಗೊಂದಳಿ ಇವರ ಮನೆಯ ಬೀಗ ಮುರಿದು ಮನೆಗಳ ಕಪಾಟಿನಲ್ಲಿ ಇಡಲಾಗಿದ್ದ ಅಪಾರ ಚಿನ್ನಾಭರಣ ಕಳ್ಳತನ ಮಾಡಿದ್ದರು.
‘ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ನಂತರ ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ’ ಎಂದು ಹೇಳಿದರು.
ಇನ್ನು ನಗರದ ಪ್ರಮುಖ ಪ್ರದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವುದು ಸವಲಾಗಿತ್ತು. ಪೊಲೀಸ್ ಅಧಿಕಾರಿಗಳ ಚಾಣಕ್ಷ್ಯ ನಡೆಯಿಂದ ಆರೋಪಿಗಳ ಬಂಧನ ಸಾಧ್ಯವಾಗಿದೆ’ ಎಂದರು.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಇವರು ಕಳ್ಳರನ್ನು ಪತ್ತೆ ಹಚ್ವುವಲ್ಲಿ ಯಶಸ್ವಿಯಾದ ಶಹರ ಠಾಣೆಯ ಪಿಎಸ್ಐ ಕಿರಣ ಮೊಹಿತೆ,ಹೆಚ್ಚುವರಿ ಪಿಎಸ್ಐ ನಿಖೀಲ ಕಾಂಬಳೆ, ಸಿಬ್ಬಂದಿಗಳಾದ ಕುಮಾರ ಇಳಿಗೇರ,ಮಂಜು ಹುಚ್ಚಗೌಡರ,ಎ,ಸಿ ಕಾಪಸಿ, ಜೆ,ಜಿ,ಗುಡ್ಡಿ,ಎಸ್,ಎಸ್,ಕುರಬೇಟ,ಸೇರಿದಂತೆ ಬೆಳಗಾವಿಯ ಟೆಕ್ನಿಕಲ್ ಸೆಲನವರಾದ ಸಚೀನ ಪಾಟೀಲ,ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಶ್ಲ್ಯಾಘಿಸಿದ್ದಾರೆ.
Fast9 Latest Kannada News