ಪೋಲಿಯೋ ಲಸಿಕೆ ಹಾಕಿಸಿ ಅಂಗವೈಪಲ್ಯ ದೂರಮಾಡಿ:ಡಾ: ಕೊಪ್ಪದ
ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಸ್ಥಳಿಯ ವೈದ್ಯರಾದ ಡಾ:ಆರ್,ಆರ್, ಅಂಟಿನ್ ಮತ್ತು ಡಾ: ಎಮ್,ಎಸ್,ಕೊಪ್ಪದ ಇವರು ಪೋಲಿಯೊ ಲಸಿಕೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಈ ಸಮಯದಲ್ಲಿ ಮಾತನಾಡಿದ ಡಾ: ಕೊಪ್ಪದ ಇವರು ಗೋಕಾಕ ತಾಲೂಕಿನಲ್ಲಿ 320 ಬೂತಗಳನ್ನು ಪ್ರಾರಂಬ ಮಾಡಿ ಅದರಲ್ಲಿ 73 ಸಾವಿರ ಮಕ್ಕಳಿಗೆ ಲಸಿಕೆ ಹಾಕುವುದಕ್ಕಾಗಿ ಪ್ರತಿಯೊಂದು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೆಂದ್ರಗಳಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಲಾಗಿದೆ ಮತ್ತು ಯಾವುದೆ ಮಕ್ಕಳು ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಾರದೆಂಬ ಉದ್ದೇಶದಿಂದ ಮಹಾರಾಷ್ಟ್ರದಿಂದ ಕಬ್ಬು ಕಟಾವುಗಾರರ ಮಕ್ಕಳಿಗೆ ಅವರು ಇದ್ದ ಸ್ಥಳಕ್ಕೆ ಹೋಗಿ ಪೋಲಿಯೋ ಲಸಿಕೆ ನೀಡಿದ್ದಾರೆಂದರು
ಈ ಸಂದರ್ಭದಲ್ಲಿ ಗೋಕಾಕ ನಗರಸಭೆ ಉಪಾದಕ್ಷರಾದ ಬಸವರಾಜ ಆರೆನ್ನವರ, ಆಯುಕ್ತರಾದ ಶಿವಾನಂದ ಹೀರೆಮಠ, ರೋಟರಿ ಕ್ಲಬ್ ಅದ್ಯಕ್ಷರಾದ ಸೋಮಶೇಖರ ಮಗದುಮ್, ಚಿಕ್ಕಮಕ್ಕಳ ತಜ್ಞರಾದ ಡಾ: ವಣ್ಣೂರ, ಡಾ: ವಾಗ್ಮೋಡೆ, ಡಾ: ಪ್ರೀತಿ, ಡಾ: ಶಾಂತ ಹಾಗೂ ಸ್ಥಳಿಯ ಅರೋಗ್ಯ ಸಿಬ್ಬಂದಿಗಳು, ಆಶಾ ,ಅಂಗನವಾಡಿ ಮತ್ತು ಸ್ಕೌಡ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.