ಲಾಕ್ ಡೌನ್ ಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಅಥಣಿ ತಾಲ್ಲೂಕಾ ಆಡಳಿತ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನರು ಲಾಕ್ ಡೌನ್ ಅನ್ನು ಕಡ್ಡಾಯವಾಗಿ ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಸದ್ಯ ರಾಜ್ಯ ಸರ್ಕಾರದ ಸುತ್ತೋಲೆಯಂತೆ ೧೪ ದಿನ ಲಾಕ್ ಡೌನ ಇರುವುದರಿಂದ ಬೆಳಗ್ಗೆ ೬ ಘಂಟೆಯಿಂದ ೧೦ ಘಂಟೆಯವರಗೆ ಅಗತ್ಯ ವಸ್ತುಗಳಾದ ಹಾಲು,ತರಕಾರಿ, ಔಷಧಿಗಳ ಮಾರಾಟ ಹೊರತುಪಡಿಸಿ ಉಳಿದ ವಹಿವಾಟು ಸ್ಥಗಿತಗೊಳಿಸುವಂತೆ ಶಿಸ್ತು ಕ್ರಮ ಜರುಗಿಸಲು ತಾಲ್ಲೂಕು ಆಡಳಿತ ಸನ್ನದ್ದವಾಗಿತ್ತು. ಇತ್ತ ಪೋಲಿಸ್ ಇಲಾಖೆಯ ಡಿವೈಎಸ್ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಮತ್ತು ಪಿಎಸ್ಐ ಕುಮಾರ ಹಾಡಕಾರ ಅವರ ತಂಡ ಕೂಡ ತಾಲೂಕಿನ ಗ್ರಾಮಗಳಿಗೆ ತೆರಳಿ ಜನರಿಗೆ ಎಚ್ಚರಿಕೆ ನೀಡುವ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಕರಿಸುವಂತೆ ತಿಳಿ ಹೇಳಿದ್ದರು.
ಆ ಬಳಿಕವೂ ಅನಗತ್ಯವಾಗಿ ತಿರುಗಾಡುವ ಜನರಿಗೆ ಹಾಗೂ ಮಾಸ್ಕ್ ಧರಿಸದವರಿಗೆ ಬಿಸಿಮೂಡಿಸಲು ಮುಂದಾದ ತಾಲ್ಲೂಕು ಆಡಳಿತ .ರಾಜ್ಯ ಸರ್ಕಾರದ ಎರಡನೆಯ ಮಾರ್ಗಸೂಚಿ ಬಂದ ಮೇಲೆ ಮತ್ತಷ್ಟು ಕಡಕ್ ಆದ ಕ್ರಮಗಳನ್ನು ಜಾರಿಗೆ ತರಬೇಕಾಗದ ಹಿನ್ನೆಲೆಯಲ್ಲಿ ೧೪ ದಿನಗಳ ಲಾಕ್ ಡೌನ್ ತಾಲ್ಲೂಕು ದಂಢಾಧಿಕಾರಿ ದುಂಡಪ್ಪ ಕೋಮಾರ ಮತ್ತು ಪಿಎಸ್ಐ ಕುಮಾರ ಹಾಡಕಾರ ರಸ್ತೆಗೆ ಇಳಿದು ಅನಗತ್ಯವಾಗಿ ಅಲೆಯುತ್ತಿದ್ದ ಜನರಿಗೆ ಪೋಲಿಸರು ರುಚಿ ತೋರಿಸುವ ಮೂಲಕ ಜನರು ರಸ್ತೆಗೆ ಇಳಿಯದಂತೆ ಮಾಡುತ್ತಿದ್ದ ದೃಶ್ಯಗಳು ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಂಡುಬಂದವು.
ಅಥಣಿ ಪುರಸಭೆಯ ಮುಖ್ಯಾಅಧಿಕಾರಿ ಮಹಾಂತೇಶ್ ಕೋಲಾಪುರ್ ಇವರ ನೇತೃತ್ವದಲ್ಲಿ ಕೋವಿಡ್ ಮಾರ್ಷಲ್ ಪಡೆ ತಂಡವನ್ನು ರಚಿಸಿ ರೋಡಿಗೆ ಬರುವ ಹೋಗುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುವುದರ ಜೋತೆಗೆ ಅನವಶ್ಯಕ ವಾಗಿ ತಿರುಗಾಡುವ ಜನರಿಗೆ ಬಿಸಿ ಮುಟ್ಟಿಸಿದರು.
ವರದಿ : ವಿಲಾಸ ಕಾಂಬಳೆ