Breaking News

ನಗರದಲ್ಲಿ ಕಳ್ಳತನ‌ ಮಾಡುತಿದ್ದವ ಕೊನೆಗೂ ಆರೆಸ್ಟ್ .

Spread the love

ನಗರದಲ್ಲಿ ಕಳ್ಳತನ‌ ಮಾಡುತಿದ್ದವ ಕೊನೆಗೂ ಆರೆಸ್ಟ್

ಗೋಕಾಕ : ಕೆಲವು ತಿಂಗಳುಗಳಿಂದ ಕಳ್ಳರ ಹಾವಳಿ ಹೆಚ್ಚಾಗಿ ಜನರ ಜೊತೆಯಲ್ಲಿ ಪೋಲಿಸ್ ಇಲಾಖೆಯ ನಿದ್ದೆಗೆಡಿಸಿದ್ದ ಕಳ್ಳನನ್ನು ಕೊನೆಗೂ ಪೋಲಿಸರು ಬಲೆಯಲ್ಲಿ ಕೆಡವಿಕೊಂಡರು, ಗೋಕಾಕ ನಗರದಲ್ಲಿ ಹಲವಾರು ತಿಂಗಳುಗಳಿಂದ ಹಲವು ಕಡೆ ಕಳ್ಳತನ ಮಾಡುತ್ತಿರುವ ಬಗ್ಗೆ ಗೋಕಾಕ ಪೋಲಿಸರು ಕಾರ್ಯಾಚರಣೆಯಲ್ಲಿ ತೊಡಗಿ ತನಿಖೆ ಆರಂಭ ಮಾಡಿದ್ದರು, ಕೊನೆಗೂ ಪೋಲಿಸ್ ಇಲಾಖೆ ಓರ್ವ ಕಳ್ಳನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹೊರವಲಯದ ಯೋಗಿಕೊಳ್ಳ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದವನನ್ನು ಅಪರಾದ ವಿಭಾಗದ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ಪಿಎಸ್ಐ ಇವರ ಸಮ್ಮುಖದಲ್ಲಿ ವಿಚಾರಿಸಿದಾಗ ಕೆಲವು ತಿಂಗಳ ಹಿಂದೆ ಪಿಡಬ್ಲೂಡಿ ಕ್ವಾಟರ್ಸದಲ್ಲಿರುವ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಆರೋಪಿತನಿಂದ 14.5 ಗ್ರಾಂ ಬಂಗಾರದ ಆಭರಣಗಳು, 75000/- ಮತ್ತು 250 ಗ್ರಾಂ ಬೆಳ್ಳಿಯ ಆಭರಣಗಳು,12500/- ಜೊತೆಯಲ್ಲಿ ಮೊಬೈಲಗಳನ್ನು, ಒಟ್ಟು 10,2500/- ರೂ ಮೌಲ್ಯದ ಬಂಗಾರದ ಮತ್ತು ಬಳ್ಳಿಯ ಆಭರಣಗಳು ಹಾಗೂ ಎರಡು ಮೋಬೈಲಗಳನ್ನು ವಶಪಡಿಸಿಕೊಂಡಿದ್ದಾರೆ, ಸದರಿ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಈ ತನಿಖೆಯಲ್ಲಿ ಡಿವಾಯ್ಎಸ್ಪಿ ಡಿ.ಎಚ್, ಮುಲ್ಲಾ, ಸಿ.ಪಿ.ಐ ಪ್ರಕಾಶ ಯಾತನೂರ ನೇತೃತ್ವದಲ್ಲಿ ಪಿ.ಎಸ್.ಐ ಎಮ್ ಡಿ ಘೋರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಿ.ವಿ ನೇರಲೆ.ಸುರೇಶ ಈರಗಾರ, ಮಲ್ಲಪ್ಪ ಗಿಡಗಿರಿ, ರಮೇಶ ಮುರನಾಳೆ, ವಿಠ್ಠಲ ನಾಯಕ, ಸಿ ಎಸ್ ಬಿರಾದಾರ, ಎನ ಬಿ ಬೆಳಗಲೆ, ಎಸ್ ಬಿ ಪೂಜೇರಿ ಇವರು ಕಾರ್ಯಾಚರಣೆಯಲ್ಲಿ ಇದ್ದರು.ಇದರಿಂದ ಗೋಕಾಕ ನಗರದ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ,ಇವರ ಈ ಕಾರ್ಯಕ್ಕೆ ನಗರವಾಸಿಗಳು ಮೆಚ್ಚುಗೆ ವ್ಯಕ್ತ ಪಡಿಸಿ ಬಾಕಿ ಉಳಿದ ಕಳ್ಳತನದ ಪ್ರಕರಣಗಳನ್ನು ಬೇದಿಸಲು ವಿನಂತಿಸಿದ್ದಾರೆ,


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *