ಇಂಗಳಿ ಹಾಗೂ ಕಲ್ಲೋಳ್ಳ ಗ್ರಾಮದ ನೇರೆ ಸಂತ್ರಸ್ತರಿಗೆ
ಆಕ್ಷನ್ ಏಡ್ ಅಸೋಸಿಯೇಷನ್ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ
ಇಂಗಳಿ- ಕಲ್ಲೋಳ್ಳ: ಕಳೆದ ಎರಡು ವರ್ಷದಿಂದ ಕೃಷ್ಣಾ ನದಿಯಿಂದ ಪ್ರವಾಹ ಹಾಗೂ ಮಹಾಮಾರಿ ಕೊರೋನಾ ಸೋಂಕಿನಿಂದ ನೂರಾರು ದಲಿತ ಬಡ ಕುಟುಂಬಗಳು ದಿನಕೂಲಿ ಕೆಲಸವಿಲ್ಲದೆ ಜನಜೀವನ ನಡೆಸುವುದಕ್ಕೆ ತುಂಬಾ ಕಷ್ಟ ಪಡುತ್ತಿರುವವರಿಗೆ ಆ್ಯಕ್ಷನ್ ಏಡ್ ಅಸೋಸಿಯನ್ ಸಂಸ್ಥೆಯ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಸಹಾಯ ಮಾಡಿದ್ದಾರೆಂದು ಜಿಲ್ಲಾ ಸಂಯೋಜಕ ನಾಮದೇವ ಹಿರೇಕೂಡಿ ಹೆಳಿದರು.
ಅವರು ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ
ಪ್ರವಾಹ ಪೀಡಿತರ ಹಾಗೂ ಕೋರೋನಾ ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಆ್ಯಕ್ಷನ್ ಏಡ್ ಅಸೋಸಿಯನ್ ಬೆಂಗಳೂರು ಸಂಸ್ಥೆಯಿಂದ ಇಲ್ಲಿಯವರೆಗೆ 1.5 ಕೋಟ ರೂಪಾಯಿಗಳ ಜೀವನಾವಶ್ಯಕ ಹಾಗೂ ಆಹಾರ ಕೀಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ.
ಇಂಗಳಿ ಗ್ರಾಮದಲ್ಲಿ ಕೃಷ್ಣಾ ತೀರದ ಪ್ರವಾಹ ಪೀಡಿತ ಗ್ರಾಮದ ದಲಿತ ಕುಟುಂಬಗಳಿಗೆ 378 ಕುಟುಂಬಗಳಿಗೆ ಹಾಗೂ ಕಲ್ಲೋಳ್ಳ ಗ್ರಾಮದಲ್ಲಿ 285 ಆಹಾರ ಕೀಟ್ ವಿತರಣೆ ಮಾಡಿದ್ದಾರೆ.
ಗ್ರಾಮದ ಪ್ರವಾಹ ಪಿಡಿತ ದಲಿತ ಕುಟುಂಬದವರಿಗೆ ಸಹಾಯ ಮಾಡುತ್ತಾ ಇದ್ದಾರೆ 2019 ರಿಂದ ಇಲ್ಲಿವರೆಗೆ ಈ ಸಂಸ್ಥೆ ಕಷ್ಟದಲ್ಲಿದ್ದ ಜನರ ಜೊತೆ ಭಾಗಿ ಆಗತ್ತಾ ಇದ್ದಾರೆ ಹಲವಾರು ಕುಟುಂಬಗಳಿಗೆ ಮೇಕೆ ಸಾಗಾಣಿಕೆ ಹಾಗೂ ಚಿಕ್ಕ ಉದ್ಯೋಗಕ್ಕೆ ಈ ಸಂಸ್ಥೆವು ಅನೂಕುಲ ಮಾಡಿ ಕೋಟ್ಟಿದೆ. ಪ್ರವಾಹ ಪೀಡಿತ ಗ್ರಾಮದಗಳಲ್ಲಿ ಬಡ ಕುಟುಂಬಕ್ಕೆ ಇಲ್ಲಿಯವರೆಗೆ ಸೂಮಾರು 2500 ಸಾವಿರ ಆಹಾರ ಕೀಟ್‍ವನ್ನು ವಿತರಿಸಲಾಗಿದೆ.
ಪ್ರವಾಹ ಪೀಡಿತ ಗ್ರಾಮದ ಹಲವಾರು ಕುಟುಂಬಕ್ಕೆ ವಾಸ ಮಾಡಲು ಮನೆ ಕಟ್ಟಿಕೊಳ್ಳಲ್ಲು ಹಾಗೂ ಮನೆ ದುರುಸ್ತಿಗೆ 50000 ಸಾವಿರದಿಂದ 1 ಲಕ್ಷ ರೂಪಾಯಿಗಳ ಸಹಾಯಧನ ಮಾಡಲಾಗಿದೆ. ಶಾಸ್ವತವಾಗಿ ಪೂನರ್ವಸತಿ ಕಲ್ಪಿಸುವ ವರೆಗೆ ಆ್ಯಕ್ಷನ್ ಏಡ್ ಅಸೋಸಿಯನ್ ಬೆಂಗಳೂರು ಸಂಸ್ಥೆಯು ಕೆಲಸವನ್ನು ಮಾಡುತ್ತಿದೆ. ರಾಜ್ಯದ ಆ್ಯಕ್ಷನ್ ಏಡ್ ಅಸೋಸಿಯನ್ ಬೆಂಗಳೂರು ಮೆಲಾಧಿಕಾರಿ ನಂದಿನಿ ಮೆಡಂ, ರಾಘವ ,ರೇಶ್ಮಾ ಮೆಡಂ, ಇವರ ನೇತೃತ್ವದಲ್ಲಿ ನಾವು ಕೆಲಸವನ್ನು ಮಾಡುತಾ ಬಂದಿದ್ದೇವೆ ಎಂದು ಜಿಲ್ಲಾ ಸಂಯೋಜಕ ನಾಮದೇವ ಹಿರೇಕೂಡಿ ಹೇಳಿದರು.
ಈ ಸಂದರ್ಭದಲ್ಲಿ ಮಹೇಶ್ ಸಿಂಗೆ, ಅಕ್ಷಯ ಸಾಕ್ರಿ,ಅಭಜಿತ ಸಿಂಗೆ,ಕೇಶವ ಸಿಂಗೆ,ಅಮೀತ ಶಾಸ್ತ್ರಿ, ಶಿವಾನಂದ ಕಾಂಬಳೆ,ಪರಶುರಾಮ ಸಿಂಗೆ,ಮಹಾದೇವ, ಕಾಂಬಳೆ,ವಿನೂತ ಪಿಂಜಾರ,ಉಲ್ಲಾಸ ಮಂಗಸೂಳೆ,ಸೌರಭ ಕಾಂಬಳೆ ಹಾಗೂ ಕಲ್ಲೋಳ್ಳಿ ಗ್ರಾಮದ ಶಂಕರ ಶಾಹಿರ. ಸುರೇಶ ಕಾಳಿ. ಅರುಣ ಕಮತೆ. ರಾಜು ದೊಡ್ಡಮನಿ. ಪ್ರಭಾಕರ ಶಿಂಗೆ. ರಾಜೇಶ ಕೋಳಿ.
ಇನ್ನೂ ಹಲವು ಜನರು ಭಾಗಿಯಾಗಿದ್ದರು