ವಿದ್ಯುತ್ ತಂತಿ ತಗುಲಿ ಕಬ್ಬಿನ ಗದ್ದೆ ಬೆಂಕಿಗೆ ಆಹುತಿ
ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಹುಲಿಕೇರಿ ಕ್ರಾಸ್ ಸಮೀಪವಿರುವ ವಾಸಂತಿ ವಾಡೇಕರ ಎಂಬ ರೈತರ ಹೊಲದಲ್ಲಿ ಮಂಗಳವಾರದಂದು ಮಧ್ಯಾಹ್ನ ಆಕಸ್ಮಿಕವಾಗಿ ವಿದ್ಯುತ್ ತಂತಿಗಳೆರಡು ಜೋಡಣೆಯಾಗಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಅಂದಾಜು 10 ಎಕರೆ ಭೂಮಿಯಲ್ಲಿ 300 ಟನ್ ಕಬ್ಬು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದೆ.
ಈ ರೈತರ ಹೊಲವನ್ನು ಲಿಂಗನಮಠ ಗ್ರಾಮದ ಮಹಾಂತೇಶ ಸಂಗೊಳ್ಳಿ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕಬ್ಬು ಲಾವಣಿ ಮಾಡುವ ರೈತರು ಅಲ್ಲಲ್ಲಿ ಸಾಲ ಪಡೆದು ಕಬ್ಬನ್ನು ಬೆಳೆದಿರುತ್ತಾರೆ. ಆದರೆ ಈ ವರ್ಷ ಕಾರ್ಖಾನೆಯಿಂದ ಸರಿಯಾಗಿ ಕಬ್ಬು ಕಟಾವು ಮಾಡುವ ಗ್ಯಾಂಗ್ ಸಿಗದೇ ಇದ್ದುದರಿಂದ ಕಬ್ಬು ಕಟಾವು ಮಾಡುವುದು ತಡವಾಗಿದೆ. ಈಗ ಸಾಲ ಮಾಡಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ಹೇಗೆ ಸಾಗಿಸಬೇಕು ಹಾಗೂ ಬೆಳೆ ಬೆಳೆಯಲು ಪಡೆದ ಸಾಲವನ್ನು ಹೇಗೆ ತೀರಿಸಬೇಕೆಂದು ಬೇಳೆ ಹಾನಿಗೊಳಗಾದ ರೈತ ಮಹಾಂತೇಶ ಸಂಗೊಳ್ಳಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪಂಚನಾಮೆ ಮಾಡಿಕೊಂಡು ಹೋಗಿರುತ್ತಾರೆ.