*ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ*
ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿನ ಬೀಮ ಆರ್ಮಿಯ ಸದಸ್ಯರಿಂದ 203 ನೆ ಕೊರೆಗಾಂವ ವಿಜಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ದುಪದಾಳ ಅಲ್ಲದೆ ಗೋಕಾಕ ತಾಲೂಕಿನಾದ್ಯಂತ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಇತಿಹಾಸ ತಿಳಿಸುತ್ತಾ ಪ್ರತಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಿದರು.
ಅದರಂತೆ ಕೊಣ್ಣೂರಿನ ಅಂಬೇಡ್ಕರ ನಗರದಲ್ಲಿನ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಲಾರ್ಪಣೆ ಮಾಡಿಸಿ ಜೈಕಾರ ಹಾಕಿ ಕೊರೆಗಾಂವ ವಿಜಯೋತ್ಸವ ಆಚರಿಸಿದರು.
ಈ ಸಮಯದಲ್ಲಿ ಮಾತನಾಡಿದ
ಸ್ಥಳಿಯ ಭೀಮ ಆರ್ಮಿಯ ಮುಖಂಡ ಸಂತೋಷ ದೊಡಮನಿಯವರು
ಕೊರೆಗಾಂವ ಯುದ್ದ ನಮ್ಮ, ಅಸ್ಮಿಯತೆಯ,ಪರಾಕ್ರಮದ,ಮೇಲಿನ ನಾವು ಗೆದ್ದಿರುವಂತಹ ಯುದ್ದ ಅದನ್ನು ಆಚರಿಸಲು ಪ್ರತಿ ವರ್ಷ ಬಾಬಾ ಸಾಹೇಬರು ಪುಣೆಯಿಂದ ಬಂದು ಕೊರೆಗಾಂವದಲ್ಲಿ ಬೀಮಾ ಕೊರೆಗಾಂವ ವಿಜಯೋತ್ಸವ ಆಚರಿಸುತಿದ್ದರು ಅದರೆ ಅವರು ಈಗ ಇಲ್ಲದಿದ್ದರೆ ಎನಾಯಿತು ಅವರ ವಂಶಸ್ಥರಾದ ನಾವುಗಳು ಕೇವಲ ಕೊರೆಗಾಂವದಲ್ಲಿ ಮಾತ್ರವಲ್ಲದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ಕೊರೆಗಾಂವ ವಿಜಯೋತ್ಸವವನ್ನು ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಕರೆಪ್ಪ ಮೇಗೇರಿ,ಮಯೂರ ಗುಡಜ, ರಮೇಶ ಮಲ್ಲಪ್ಪಗೋಳ, ಬೀಮ್ ಆರ್ಮಿಯ ಸಂತೋಷ ,ಸುನೀಲ, ಆನಂದ್, ಸುನೀಲ ಹಾಗೂ ಇನ್ನೂಳಿದ ಮುಖಂಡರು ಉಪಸ್ಥಿರಿದ್ದರು