ಸಂವಿಧಾನವನ್ನು ಗೌರವಿಸುತ್ತ ದೇಶದ ಪ್ರಗತಿಗೆ ಕೈಜೋಡಿಸಬೇಕು : ಕಮಲಾ ಕರೆಮ್ಮನವರ.
ಸಂಸ್ಥೆಯ ಅದ್ಯಕ್ಷರಾದ ಜಿನ್ನಪ್ಪ ಚೌಗಲಾ, ಶಿವಮೊಗ್ಗದ ಎಮ್,ಗುರುಮೂರ್ತಿ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಿಳಾ ಸಂಘಟನಾ ಸಂಚಾಲಕಿ ಕಮಲಾ ಕರೆಮ್ಮನ್ನವರ,ಅಲ್ಪ ಸಂಖ್ಯಾತರ ರಾಜ್ಯ ಸಂಚಾಲಕ ರಫೀಕ ಭೋಕರೆ,
ಗೋಕಾಕ ತಾಲೂಕಾ ಸಂಚಾಲರಾದ ರವಿ ಕಡಕೋಳ,ಕಾರ್ಯದರ್ಶಿ ಮಹಾವೀರ ಬೂದಿಗೊಪ್ಪ ಸದಸ್ಯರುಗಳಾದ ಸಚಿನ ಸಮಯ,ಸಿದ್ದಪ್ಪ ಬೊರಗಲ್ಲೆ,ಅರುಣ ಹೋಳಿ,ಮಹಾವೀರ ಪಾಟೀಲ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಕು.ಸುಧಾ ಪೂಜೇರಿಯವರುರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಪೂಜೆ ಸಲ್ಲಿಸಿ ದ್ವಜಾರೋಹಣ ನೇರವೆರಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಕಮಲಾ ಕರೆಮ್ಮನ್ನವರ ಅವರುಭಾರತದ ಸಂವಿಧಾನವು ಜಗತ್ತಿನಲ್ಲೇ ಅತೀ ದೊಡ್ಡ ಸಂವಿಧಾನವಾಗಿದೆ.ಇದು ದೇಶದ ಉತ್ತಮ ನಾಗರಿಕರಾಗಲು ನಮಗೆ ಸಹಾಯ ಮಾಡುತ್ತದೆ.ನಮ್ಮ ದೇಶದ ಪ್ರಜೆಗಳಿಗೆ ಶಾಂತಿಯುತಜೀವನ ಮಾಡಲು,ಸಂವಿಧಾನದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಸಂವಿಧಾನವು ಸರಕಾರದ ದಿಕ್ಕೂಚಿಯಾಗಿದೆ.ನಾವೆಲ್ಲ ಸಂವಿಧಾನವನ್ನು ಗೌರವಿಸುತ್ತಾ ಅದರ ಅಡಿಯಲ್ಲಿ ದೇಶದ ಪ್ರಗತಿಗೆ ಕೈಜೋಡಿಸಬೇಕು.ನಮ್ಮ ಸಂವಿಧಾನವು 1950 ಜನವರಿ 26ರಂದು ಅಧಿಕೃತವಾಗಿ ಜಾರಿಗೆ ಬಂದಿತು. ಅಂದಿನಿಂದ ಇಂದಿನವರೆಗೆ ಭಾರತದ ಪ್ರಜೆಗಳಾದ ನಾವು ಶಾಂತಿಯುತ ಜೀವನವನ್ನು ನಡೆಸಲು ಸಂವಿಧಾನವು ಕಾರಣವಾಗಿದೆ ಎಂದು ತಮ್ಮ ನುಡಿಗಳನ್ನು ವ್ಯಕ್ತಪಡಿಸಿದರು.ತಾಲೂಕಾ ಸಂಚಾಲಕ ರವಿ ಕಡಕೋಳ ರವರು ತಮ್ಮ ಭಾಷಣದಲ್ಲಿ ದಿನದ ಮಹತ್ವವನ್ನು ತಿಳಿಸಿದರು ಮತ್ತು ಮಕ್ಕಳಿಗೆ ದೇಶದ ಬವಿಷ್ಯವು ಅವರ ಕೈಯಲ್ಲಿದೆ ಎಂದು ಅರಿವು ಮೂಡಿಸಿದರು.ಆದ್ದರಿಂದ ಚೆನ್ನಾಗಿ ವಿದ್ಯಾಬ್ಯಾಸ ಮಾಡಬೇಕು ಮತ್ತು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಶಾಲಾ ಮೈದಾನದಲ್ಲಿ ನಡೆದ ಮಕ್ಕಳ ಪರೇಡ ಮುಗಿದ ನಂತರ ಗಣರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ತಂಡಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ವತಿಯಿಂದ ಆಯೊಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳಿಗೆ ಹುರದುಂಬಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಮಹೆಶ್ವರಿ ಪಾಟೀಲ,ಸುರೇಖಾ ವಗ್ಗನ್ನವರ,ಭಾರತಿ ಸಂಗೋಳ್ಳಿ,ರೇಖಾ ಪೂಜೇರಿ,ಲಕ್ಷ್ಮೀ ನಡುವಿನಮನಿ,ಚಂದ್ರವಾ ಸುಕುಂಡೆ,ಭಾರತಿ ಅಂಬೀಗೇರ,ಸಾವಿತ್ರಿ ಉಗರಖೋಡ,ಸುಮನ ಕುಂದರಗಿ,ಗೀತಾ ಹಲಗಿ,ಶಾಶ್ವತಾ ಪಾಸಲಕರ,ಪ್ರಿಯಾಂಕಾ ಕಳ್ಳಿಮನಿ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.ಶಾಲಾ ಮುಖ್ಯೋಪಾದ್ಯಾಯಿನಿ ಸುಧಾ ಪೂಜೇರಿ ಇವರು ವಂದಿಸಿದರು.