ಕುಡಿದಾಗ ತೊಂದರೆ ನೀಡುತಿದ್ದವ 112 ವಾಹನ ಬಂದಾಗ ಪರಾರಿ
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟದ ಅಂಬೇಡ್ಕರ್ ನಗರದಲ್ಲಿರುವ ರಮೇಶ ಶಿವಪ್ಪ ನಡಗೇರಿ ಇತನು ಕುಡಿದ ಅಮಲಿನಲ್ಲಿ ಮನೆಯಲ್ಲಿ ಕುಳಿತಂತಹ ಹೆಣ್ಣು ಮಕ್ಕಳಿಗೆ ತೊಂದರೆ ನೀಡುತಿದ್ದನು, ನೀನು ಕುಡಿದಿದ್ದಿಯಾ ಮನೆಗೆ ಹೋಗು ಎಂದು ಬುದ್ದಿಮಾತು ಹೇಳಿದರು ಸಹ ಹೋಗದೆ ಮತ್ತೆ ತೊಂದರೆ ನೀಡುತಿದ್ದ ತಕ್ಷಣ ಸರಕಾರ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಲು ತಿಳಿಸಿದ್ದಂತೆ 112 ಕ್ಕೆ ಕರೆ ಮಾಡಿದಾಗ ಕೆಲವೆ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ 112 ವಾಹನ ಮತ್ತು ಪೋಲಿಸ್ ಸಿಬ್ಬಂದಿ ನೋಡಿ ಪರಾರಿಯಾಗಿದ್ದಾನೆ, ಇದರಿಂದ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಕರಿಗೆ 112 ವಾಹನ ಆಗಮಿಸಿದ್ದರಿಂದ ಇನ್ನುಂದೆ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿದರೆ ಸಹಾಯಕ್ಕಾಗಿ ಬರುತ್ತಾರೆ ಎಂಬುದು ಮನವರಿಕೆಯಾಯಿತು.
ಆದರ ಜೊತೆಯಲ್ಲಿ ಕುಡಿದವನಿಂದ ಮತ್ತೆ ತೊಂದರೆಯಾದಲ್ಲಿ ಸ್ಥಳಿಯ ಪೋಲಿಸ್ ಠಾಣೆಗೆ ತಿಳಿಸಲು 112 ರ ಸಿಬ್ಬಂದಿಗಳು ತಿಳಿಸಿದ್ದಾರೆ.
*ತುರ್ತು ಪರಿಸ್ಥಿತಿಯಲ್ಲಿದ್ದಾಗ 112ಕ್ಕೆ ಕರೆ ಮಾಡಲು ಮರೆಯದಿರಿ*
Fast9 Latest Kannada News