Breaking News

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

Spread the love

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಗೋಕಾಕ ತಾಲೂಕಿನ ಕೊಣ್ಣೂರಿನ‌ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಸ್ಥಳಿಯ ಗುರುಸ್ವಾಮಿ ಯಶರಾಜ್,ಮಲ್ಲಾಪುರ ಪಿ,ಜಿ,ಯ ಗುರುಸ್ವಾಮಿಗಳಾದ ಕಾಳೆ ಗುರುಸ್ವಾಮಿಗಳು,ಸುಣದೋಳಿಯ ಉಮೇಶ ಗುರುಸ್ವಾಮಿ, ಪಾಲ್ಸ್ ನ . ರವಿ ಮತ್ತು ಮಹೇಶ ಗುರುಸ್ವಾಮಿ ಹಾಗೂ ವಿವಿದ ಗ್ರಾಮದ ಸನ್ನಿದಾದ ಗುರುಸ್ವಾಮಿಗಳ ನೇತೃತ್ವದಲ್ಲಿ 16 ನೆಯ ವರ್ಷದ ಮಹಾಪೂಜೆಯನ್ನು ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜರುಗಿತು.

ಈ ಮಹಾಪೂಜೆಗೆ ಸುತ್ತಮುತ್ತಲಿನಿಂದ ಗುರುಸ್ವಾಮಿಗಳ ಜೊತೆ ಕನ್ನಿ ಸ್ವಾಮಿಗಳು, ಪಡಿ ಸ್ವಾಮಿಗಳು,ಗಂಟಿ ಸ್ವಾಮಿಗಳು ಸೇರಿದಂತೆ ನೂರಾರು ಸ್ವಾಮಿಗಳು ವಿವಿದ ವಾದ್ಯ ಮೇಳಗಳಿಂದ ಆಗಮಿಸಿ ಅಯ್ಯಪ್ಪನ ಬಕ್ತಿ ಹಾಡುಗಳನ್ನು ಹಾಡಿ, ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಭಿಷೇಕ, ಪುಷ್ಪಾರ್ಚಣೆ ಮಾಡುವುದರ ಜೊತೆಯಲ್ಲಿ ಕೊಣ್ಣೂರಿನ ಹಿರಿಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಗುಡ್ಡಾಕಾಯು ಗುರುಗಳು ಹಾಗೂ ಗ್ರಾಮಸ್ಥರು ಸೇರಿ ಹದಿನೆಂಟು ಮೆಟ್ಟಿಲುಗಳಿಗೆ ದೀಪ ಹಚ್ಚಿ ಗುರುಸ್ವಾಮಿಗಳಿಂದ ಆಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಣ್ಣ ದಾನ, ದನ ಸಹಾಯ ಮಾಡಿದವರಿಗೆ ಆಗಮಿಸಿದ ಗುರುಸ್ವಾಮಿಗಳು ಹರಿಸಿದರು. ಕೊಣ್ಣೂರ ಗ್ರಾಮದ ಸನ್ನಿದಾನದ ಗುರು ಸ್ವಾಮಿಗಳಾದ ಉದಯ ಗುರುಸ್ವಾಮಿ, ಜಗ್ಗೇಶ ಸ್ವಾಮಿ, ಅಮೀತ ಸ್ವಾಮಿ, ಚೇತನ ಸ್ವಾಮಿ, ರಾಜು ಸ್ವಾಮಿ, ಮಾರುತಿ ಸ್ವಾಮಿ, ಕಾಡು ಸ್ವಾಮಿ, ಪರಶುರಾಮ ಸ್ವಾಮಿ, ಸಂಜು ಸ್ವಾಮಿ, ಹೊಳೆಪ್ಪ ಸ್ವಾಮಿ, ರಮೇಶ ಸ್ವಾಮಿ, ಈರಪ್ಪ ಸ್ವಾಮಿ, ಹಾಗೂ ಇನ್ನೂಳಿದ ಮಾಲಾದಾರಿಗಳು ಮತ್ತು ನೂರಾರು ಸ್ಥಳಿಯರು ಈ ಮಹಾಪೂಜೆಯಲ್ಲಿ ಬಾಗವಹಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾದರು.


Spread the love

About fast9admin

Check Also

ಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ: ಬೆಮ್ಯೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ.

Spread the loveಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ: ಬೆಮ್ಯೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ. *ಕಣಗಲಾ(ತಾ.ಹುಕ್ಕೇರಿ)-* ಎಲ್ಲ ಸಮಾಜಗಳನ್ನು …

Leave a Reply

Your email address will not be published. Required fields are marked *