Breaking News

ಇತಿಹಾಸ ಅರಿಯದವರು ಸೃಷ್ಟಿಸಲಾರರು: ಕುರಣಿ

Spread the love

ಇತಿಹಾಸ ಅರಿಯದವರು ಸೃಷ್ಟಿಸಲಾರರು: ಕುರಣ

ಗೋಕಾಕ ತಾಲೂಕಿನ ಕೊಣ್ಣೂರಿನ ಅಂಬೇಡ್ಕರ ನಗರದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಯಾದ ಸಂಪತ್ತರಾವ ಕುರಣಿ ಮಾತನಾಡಿ ಬಾಬಾ ಸಾಹೇಬರು ಹೇಳಿದಂತೆ ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೊ ಅವರು ಇತಿಹಾಸ ಸೃಷ್ಟಿಸಲಾರರು ಎಂದರು.ಅದಕ್ಕಾಗಿ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ, ಕೇವಲ ಶಾಲೆಗಳಿಗೆ ಕಳಿಸಿದರೆ ಪಾಲಕರ ಪಾತ್ರ ಮುಗಿಯೊದಿಲ್ಲ ಅವರ ದಿನನಿತ್ಯದ ಚಟುವಟಿಕೆಗಳತ್ತ ಗಮನಹರಿಸಬೇಕು ಅದರಂತೆ ಈಗಿನ ಯುವಕರು ಮೊಬೈಲಗಳಲ್ಲಿಯೆ ಕಾಲಹರಣ ಮಾಡುವುದನ್ನು ಬಿಟ್ಟು ಎನಾದರೂ ಸಮಾಜಕ್ಕೆ ಆಗದೆ ಇದ್ದರು ತಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲು ಮುಂದಾಗಬೇಕೆಂದರು.

ಈ ಸಮಯದಲ್ಲಿ ಕೊಣ್ಣೂರ ಪುರಸಭೆಯ ಉಪದಕ್ಷರಾದ ಬೂತಪ್ಪ ಹುಕ್ಕೇರಿ ಇವರು ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪೊಲಿಸ್ ಅಧಿಕಾರಿಯಾದ ಬಾಲಚಂದ್ರ ಶಿಂಗ್ಯಾಗೋಳ, ಯಮನಪ್ಪ ಕೊಣ್ಣೂರ, ಸದಸ್ಯರಾದ ಕುಮಾರ ಕೊಣ್ಣೂರ, ಮುಖಂಡರಾದ ದನ್ಯಕುಮಾರ ಮೇಗೇರಿ.ವೆಂಕಟೇಶ ಕೇಳಗೇರಿ, ಸದಾನಂದ ಶಿಂಗ್ಯಾಗೋಳ, ಮಯೂರ ಗುಡಜ,‌ ಕೆಂಪಣ್ಣ ನಡಗೇರಿ,ಶಿವಾನಂದ ಹಾದಿಮನಿ,ನಾಗರಾಜ ಸಂಗೊಳ್ಳಿ,ಸಂಜಯ ಮಲ್ಲಪ್ಪಗೋಳ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.


Spread the love

About Fast9 News

Check Also

ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ

Spread the love  ಗೋಕಾಕ : ತಾಲೂಕಿನ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು …

Leave a Reply

Your email address will not be published. Required fields are marked *