KPTCL ಅಕ್ರಮ ಬಾಗಿಯಾದ 3 ಯುವತಿಯರ ಜೊತೆ ಒರ್ವನ ಬಂಧನ
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಯುವತಿಯರೂ ಸೇರಿದಂತೆ ಮತ್ತೆ 4 ಆರೋಪಿಗಳನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಗೋಕಾಕ ತಾಲೂಕು ಮರಡಿಮಠದ ವೈಷ್ಣವಿ ಬಾಳಪ್ಪ ಸನದಿ (21),ಸುಧಾರಾಣಿ ಹುವಪ್ಪ ಅರಬಾಂವಿ (24) ತುಕ್ಕಾನಟ್ಟಿಯ ಐಶ್ವರ್ಯ ರಾಮಚಂದ್ರ ಬಾಗೆವಾಡಿ (22) ಹಾಗೂ ಬಗರನಾಳದ ಬಸವರಾಜ ರಾಮಪ್ಪ ಹಾವಡಿ (27) ಎಂದು ಗುರುತಿಸಲಾಗಿದೆ. ಬಂಧಿತರಿಂದ ಡಿವೈಸ್ ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಆರೋಪಿಗಳ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.
ಇವರೆಲ್ಲರೂ ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದರು
ಆರೋಪಿತರಿಂದ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್, ಮೊಬೈಲ್ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.