Breaking News

ತ್ರಿವೇಣಿ ಸಂಗಮದಲ್ಲಿಯೂ ಸಾಹುಕಾರ್ ಹವಾ*ಸ್ನಾನ ಮಾಡುವ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜೈಕಾರ ಹಾಕಿದ ಕಾರ್ಯಕರ್ತರು*

Spread the love

*ತ್ರಿವೇಣಿ ಸಂಗಮದಲ್ಲಿಯೂ ಸಾಹುಕಾರ್ ಹವಾ*ಸ್ನಾನ ಮಾಡುವ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜೈಕಾರ ಹಾಕಿದ ಕಾರ್ಯಕರ್ತರು*

*ಪ್ರಯಾಗರಾಜ್* (ಉತ್ತರ ಪ್ರದೇಶ)- ಗೋಕಾಕ ಸಾಹುಕಾರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ಏಕಕಾಲದಲಿಯೇ ಶಾಸಕರಾಗಿದ್ದರೆ, ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಸಂಸದರಾಗಿ ಚುನಾಯಿತರಾಗಿದ್ದಾರೆ.
ಜಾರಕಿಹೊಳಿ ಹೆಸರು ಹೇಳಿದ್ರೆ ಸಾಕು. ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸುವಂತಹ ಕ್ರೇಜ್ ಇದೆ. ಅದು ಯಾವುದೇ ಸರ್ಕಾರ ಇರಲಿ. ಅಲ್ಲಿ ಗೋಕಾಕ ಸಾಹುಕಾರರು ಇಲ್ಲದ ಸಂಪುಟವೇ ಅಸ್ತಿತ್ವಕ್ಕೆ ಬರಲ್ಲ. ಅದು ಯಾವ ಪಕ್ಷವೇ ಆಡಳಿತ ನಡೆಸಲಿ. ಗೋಕಾಕ್ ಸಾಹುಕಾರರ ಖದರ್ ಇದ್ದೇ ಇರುತ್ತೆ.
೧೪೪ ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಹಾಗರಾಜ್ದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಮತ್ತೊಮ್ಮೆ ಸಾಹುಕಾರ್ ಅವರ ಹೆಸರು ಸದ್ದು ಮಾಡಿದೆ.
ಮಹಾ ಕುಂಭ ಮೇಳಕ್ಕೆ ದಿನಾಲು ಲಕ್ಷಾಂತರ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಸ್ನಾನ ಮಾಡುತ್ತಿದ್ದಾರೆ. ದೇಶ – ವಿದೇಶಗಳಿಂದ ಜನರು
ಪ್ರಹಾಗರಾಜಕ್ಕೆ ಬರುತ್ತಿದ್ದಾರೆ.
ಇಂದು ಶನಿವಾರದಂದು ಅರಭಾವಿ ಕ್ಷೇತ್ರದ ಜನರು ಆಗಮಿಸಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಹರ ಹರ ಮಹಾದೇವನ ಜತೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜೈಕಾರ ಹಾಕುವ ಮೂಲಕ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿ ಅಭಿಮಾನ ಮೆರೆದಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವರು ಸುಖ, ಶಾಂತಿ, ನೆಮ್ಮದಿ, ಆಯುರಾರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇತ್ತೀಚೆಗೆ ಅಷ್ಟೇ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಆಗಲೆಂದು ಕಾಂಗ್ರೆಸ್ ಕಾರ್ಯಕರ್ತರು ಹರಕೆ ಹೊತ್ತುಕೊಂಡು ಬಂದು ನದಿಯಲ್ಲಿ ಸ್ನಾನ ಮಾಡಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಜಾರಕಿಹೊಳಿ ಸಹೋದರರ ಹವಾ ಅಂತರ್ ರಾಜ್ಯಮಟ್ಟದಲ್ಲಿಯೂ
ಬೀಸುತ್ತಿರುವುದು ಕಾರ್ಯಕರ್ತರ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರ ಜೊತೆ ಸಾಹುಕಾರ ಅವರ ಕಾರ್ಯಕರ್ತರಾದ ಮುತ್ತಪ್ಪ ಕುಳ್ಳುರ್, ರಾಜು ಕಸ್ತೂರಿ, ಪಾಂಡು ದೊಡಮನಿ, ಅಶೋಕ ಹಸರಂಗಿ, ಬಾಳಪ್ಪ ಕಾಪಸಿ ಸೇರಿದಂತೆ ಹಲವರು ಐತಿಹಾಸಿಕ ಗಂಗಾ- ಯಮುನಾ- ಸರಸ್ವತಿ ತ್ರಿ ವೇಣಿ ಸಂಗಮ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.


Spread the love

About Fast9 News

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *