ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು: ಬಸವರಾಜ ಕುರಿಹುಲಿ
ಗೋಕಾಕ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಕುರಿತು ಗೋಕಾಕ ತಾಲೂಕಿನ ಖನಗಾಂವದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜರುಗಿತು..
ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ ಕುರಿಹುಲಿ ನೇತೃತ್ವದಲ್ಲಿ ನಡೆದ
ಸದರಿ ಕಾರ್ಯಾಗಾರಕ್ಕೆ ಮೂಡಲಗಿ,ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಹಶೀಲ್ದಾರ್ ಗೋಕಾಕ ಹಾಗೂ ಬೆಳಗಾವಿ ಜಿಲ್ಲೆಯ 11 ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳ ಪ್ರಾಂಶುಪಾಲರು, ನಿಲಯಪಾಲಕರು ಹಾಗೂ 6 ವಿಷಯ ಶಿಕ್ಷಕರು ಭಾಗವಹಿಸಿ ಫಲಿತಾಂಶ ಸುಧಾರಣೆ ಕುರಿತು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯೊಂದಿಗೆ ಶಾಲೆಯ ಫಲಿತಾಂಶ ಶೇಕಡಾ 100 ರಷ್ಟು ಕೊಡುವ ನಿಟ್ಟಿನಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.
ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ ಕುರಿಹುಲಿ ಇವರು ಪ್ರಾಂಶುಪಾಲರಿಗೆ, ನಿಲಯಪಾಲಕರಿಗೆ ಹಾಗೂ ಶಿಕ್ಷಕರಿಗೆ ಮಕ್ಕಳ ಭವಿಷ್ಯ ರೂಪಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಲು ಸೂಚಿಸಿ ಹುರಿದುಂಬಿಸಿದರು.
ಅದರಂತೆ ಗೋಕಾಕ ಶಿಕ್ಷಣಾಧಿಕಾರಿಯಾದ ಜಿ.ಬಿ.ಬಳಿಗಾರ ಇವರ ಜೊತೆಯಲ್ಲಿ ಗೋಕಾಕ ತಹಸಿಲ್ದಾರ ಇವರು ಶಿಕ್ಷಕರಿಗೆ ಮಾರ್ಗದರ್ಶನ ಮಾಡುವದರೊಂದಿಗೆ
ಸುಮಾರು 2 ಗಂಟೆಗಳ ಕಾಲ ಫಲಿತಾಂಶ ಸುಧಾರಿಸಲು ಉತ್ತಮ ಸಲಹೆ ನೀಡಿದರು. ಅಜಿತ್ ಮನ್ನಿಕೇರಿ ಕೂಡ ಉತ್ತಮ ಮಾರ್ಗದರ್ಶನ ಮಾಡಿದರು. ಪ್ರಾಂಶುಪಾಲರಾದ ರಾಘವೇಂದ್ರ ಗಂಗರೆಡ್ಡಿ ಇವರು ಶಿಕ್ಷಕರಿಗೆ ವಿದ್ಯಾರ್ಥಿಗಳ ಸಮಸೆಗಳನ್ನು ಪರಿಹರಿಸಿ ಉತ್ತಮ ಫಲಿತಾಂಶ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ತಿಳಿಸಿದರು..ರಾಣಿ ಚೆನ್ನಮ್ಮಾ ವಸತಿ ಶಾಲೆಯ ಪ್ರಾಂಶುಪಾಲರಾದ ಸಿ,ಎಸ,ಕಾರಜೋಳ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು