Breaking News

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಶಾಸಕರ ನಿಧಿಯಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ 2 ಲಕ್ಷ ರೂ ಮೊತ್ತದ ಪುಸ್ತಕಗಳ ವಿತರಣೆ

Spread the love

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಶಾಸಕರ ನಿಧಿಯಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ 2 ಲಕ್ಷ ರೂ ಮೊತ್ತದ ಪುಸ್ತಕಗಳ ವಿತರಣೆ

*ಮೂಡಲಗಿ*- ಮೂಡಲಗಿ ಶೈಕ್ಷಣಿಕ ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿ 2 ಲಕ್ಷ ರೂ ಮೊತ್ತದ ಪುಸ್ತಕಗಳನ್ನು ನೀಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಪಟ್ಟಣದ ಪುರಸಭೆಯ ಆವರಣದಲ್ಲಿ 2 ಲಕ್ಷ ರೂಪಾಯಿ ವೆಚ್ಚದ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಇಂಥ ಪುಸ್ತಕಗಳನ್ನು ಓದಿ ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ತಿಳಿಸಿದರು .
ಸರಕಾರದ ವಿವಿಧ ಸೇವೆಗಳಿಗೆ ಈ ಭಾಗದ ವಿದ್ಯಾರ್ಥಿಗಳು ಸಿದ್ದರಾಗಬೇಕು.
ಸದರಿ ಪುಸ್ತಕಗಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಲು ಅನುಕೂಲವಾಗಲಿವೆ. ಸರಕಾರದ ವಿವಿಧ ಹುದ್ದೆಗಳ ಮೂಲಕ ನಡೆಯುವ ಪರೀಕ್ಷೆಗಳಿಗೆ ಸಿದ್ಧತೆಗೊಳ್ಳಲು ಬೇಕಾದ ಅಗತ್ಯ ಪುಸ್ತಕಗಳಾಗಿವೆ. ಈ ಪುಸ್ತಕಗಳನ್ನು ಕಾಲೇಜುಗಳ ಹಾಗೂ ಪ್ರೌಢಶಾಲೆಗಳ ಗ್ರಂಥಾಲಯದಲ್ಲಿಟ್ಟು ವಿದ್ಯಾರ್ಥಿಗಳ ಓದಿಗೆ ಒದಗಿಸಿಕೊಟ್ಟು ಉಜ್ವಲ ಭವಿಷ್ಯ ರೂಪಿಸಲು ಅನುಕೂಲವಾಗಲಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎರಡು ಲಕ್ಷ ರೂ ಮೊತ್ತದ ಪುಸ್ತಕಗಳನ್ನು ಮೂಡಲಗಿ ಶೈಕ್ಷಣಿಕ ವಲಯದ ಐದು ಸರಕಾರಿ ಪದವಿ ಪೂರ್ವ ಕಾಲೇಜುಗಳ ಹಾಗೂ 37 ಸರ್ಕಾರಿ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಎಸ್. ಎ. ಬಬಲಿ, ಬಿಇಓ ಅಜಿತ ಮನ್ನಿಕೇರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಫಕ್ಕೀರಪ್ಪ ಚಿನ್ನನ್ನವರ, ಸಿಡಿಪಿಓ ಯಲ್ಲಪ್ಪ ಗಡಾಡಿ, ಪುರಸಭೆ ಸದಸ್ಯರು, ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Spread the loveಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ ಗೋಕಾಕ : ಯಾವುದೇ …

Leave a Reply

Your email address will not be published. Required fields are marked *