ಮೂಡಲಗಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಆಗಿ ಬಂದಿದ್ದು, ತಹಶೀಲ್ದಾರ ಮೋಹನಕುಮಾರ ಭಸ್ಮೆಯವರಿಗೆ ಮೂಡಲಗಿ ಯಾವ ಋಣಾನುಬಂಧವೂ ಗೊತ್ತಿಲ್ಲ ಆದರೆ ಈ ಕೊರೋನಾ ಎರಡನೇ ಅಲೆ ಮುನ್ಸೂಚನೆಯಿಂದಲೂ ಆ ಭಗವಂತ ಅವರನ್ನು ಇಲ್ಲಿಗೆ ಕಳಿಸಿದ್ದಾನೆ ಎಂಬ ಭಾವನೆ ಮೂಡುತ್ತದೆ.
ಮೋಹನಕುಮಾರ ಭಸ್ಮೆ ಅವರು ಬರೀ ತಹಶೀಲ್ದಾರ ಅಷ್ಟೇ ಅಲ್ಲ, ಅವರೊಳಗೆ ಇನ್ನೊಬ್ಬ ಅಧಿಕಾರಿ ಇದ್ದಾನೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ಭಸ್ಮೆ ಅವರು ಮೂಲತ ವೈದ್ಯರು. ಮೂಡಲಗಿ ತಾಲೂಕಿಗೆ ಕೊರೋನಾ ಕಂಟಕವಾಗಿರುವ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾಗಿ ಹಾಗೂ ವೈದ್ಯರಾಗಿ ಎಲ್ಲತರಹ ಸಲಹೆ ಸೂಚನೆಗಳನ್ನು ನೀಡುವುದು ಜೊತೆಗೆ ಮೂಡಲಗಿ ತಾಲೂಕಾ ಅಷ್ಟೇ ಅಲ್ಲದೆ ರಾಯಬಾಗ ತಹಶೀಲ್ದಾರಾಗಿ ಉತ್ತಮವಾದ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.
ಬಾಕ್ಸ್ ನೂಸ್ : ಮಹಾಲಿಂಪೂರ ವೆಂಕಟೇಶ ಆಸ್ಪತ್ರೆಯ ವೈದ್ಯ ಅಜೀತ ಕನಕರೆಡ್ಡಿಯರು ನಮಗೆ ಎಲ್ಲ ತರಹ ಸ್ಪಂದನೆ ನೀಡುವುದರ ಜೊತೆಗೆ ಮೊನ್ನೆ ರಾತ್ರಿ ವೇಳೆ ಸೋಂಕಿತರಿಗೆ ಯಾವುದೇ ತೊಂದರೆ ಉಂಟಗ ಬಾರದೆಂದು ಸಮೂದಾಯ ಆರೋಗ್ಯ ಕೇಂದ್ರ ವೈದರು ಸೇರಿ ಅಜೀತ ಕನಕರೆಡ್ಡಿಯವರಿಗೆ ಆಕ್ಸಿಜನ್ ಸಿಲಿಂಡರ್ ಕೇಳಿದ ಕ್ಷಣ ನಮಗೆ ಮೂರು ಸಿಲಿಂಡರ್ ನೀಡಿದ್ದಾರೆ. ಅವರಿಗೆ ತಾಲೂಕಾಡಳಿತದಿಂದ ಕೃತಜ್ಞತೆ ಸಲ್ಲಿಸುತ್ತೇವೆ.
ಡಾ.ಮೋಹನಕುಮಾರ ಭಸ್ಮೆ ತಹಶೀಲ್ದಾರ ಮೂಡಲಗಿ