ವಿಕೆಂಡ್ ನಿಯಮ ಉಲ್ಲಂಘನೆ ಮಾಡಿದವರ ವಾಹನ ಸಿಜ್ ಮಾಡಿದ ಪಿ,ಎಸ್,ಐ, ವಾಲಿಕಾರ.
ಶನಿವಾರ, ರವಿವಾರ ಬೆಳಗಾವಿ ಜಿಲ್ಲೆಯಾದ್ಯಾಂತ ಸಂಪೂರ್ಣ ಲಾಕಡೌನ್ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದರು ಸಹ ಕೆಲವು ಕಿಡಿಗೇಡಿಗಳು ನಿಯಮ ಉಲ್ಲಂಘನೆ ಬೇಕಾಬಿಟ್ಟಿ ವಾಹನಗಳ ಮೇಲೆ ತಿರುಗಾಡುತ್ತಿರುವರ ವಾಹನ ಸಿಜ್ ಮಾಡುವುದರ ಮೂಲಕ ಗೋಕಾಕ ನಗರ ಪಿ,ಎಸ್,ಐ, ಕೆ,ವಾಲಿಕಾರ ಇವರು ಬೆಳ್ಳಂಬೆಳಿಗ್ಗೆ ಪಿಲ್ಡಿಗಿಳಗಿದು ಬಿಸಿ ಮುಟ್ಟಿಸಿದ್ದಾರೆ.
ಗೋಕಾಕ ನಗರದಲ್ಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಬಂದ ಮಾಡಿ ತರಕಾರಿ ಸೇರಿದಂತೆ ಹಲವುಗಳಿಗೆ ವಿನಾಯಿತಿ ನಿಡಿದರು ಸಹ ವಿನಾಕಾರಣ ರೂಲ್ಸ್ ಬ್ರೇಕ್ ಮಾಡಿ ಅನಗತ್ಯವಾಗಿ ಹೊರಗಡೆ ಬಂದ ವಾಹನ ಸವಾರರಿಗೆ
ಮಾಸ್ಕ ಹಾಕಲು ತಿಳಿ ಹೇಳಿದರು ಹಾಗೆಯೆ ಪ್ರವಾಸಕ್ಕಾಗಿ ಪ್ರಸಿದ್ದಿ ಪಡೆದ ಗೋಕಾಕ ಪಾಲ್ಸ್ ಜಲಪಾತಕ್ಕೆ ಬರುವ ಪ್ರವಾಸಿಗರನ್ನು ನಡು ರಸ್ತೆಯಲ್ಲಿಯೆ ತಡೆದು ವಿಕೆಂಡ್ ಲಾಕಡೌನ್ ಇರುವ ಬಗ್ಗೆ ತಿಳಿಸಿ ಮರಳಿ ಕಳಿಸಿದರು.
Fast9 Latest Kannada News