207 ವರ್ಷದ ಇತಿಹಾಸದ ದೇವಸ್ಥಾನದಲ್ಲಿ ಕೇವಲ 560 ಗ್ರಾಮ ಚಿನ್ನ, ಬಕ್ತರಿಂದ ತನಿಖೆಗೆ ಒತ್ತಾಯ.
ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಕೇವಲ 560 ಗ್ರಾಮ ಚಿನ್ನ ಇರುವುದು ಭಕ್ತ ಸಮೂಹದಲ್ಲಿ ಅನುಮಾನ ಹುಟ್ಟು ಹಾಕಿದ್ದು ಅದನ್ನು ಸೂಕ್ಷ್ಮವಾಗಿ ತನಿಖೆ ಮಾಡುವಂತೆ ಒತ್ತಾಯಿಸಿ ಗೋಕಾಕ ತಾಲೂಕಿನ ಕೊಣ್ಣೂರಿನ ಶ್ರೀ ಲಕ್ಷ್ಮೀ ದೇವಸ್ಥಾನದ ಸಮಿತಿಯ ಸದಸ್ಯರು ಗೋಕಾಕ ತಹಸಿಲ್ದಾರ ಕೆ.ಮಂಜುನಾಥ ಇವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರವೀಣ ಗುಡ್ಡಾಕಾಯು ಮಾತನಾಡಿ 1816 ರಿಂದ 2023 ರ ವರೆಗೆ 207 ವರ್ಷ ಇತಿಹಾಸವುಳ್ಳ ನಾಯಕ ಸಮಾಜದ ಶ್ರೀಲಕ್ಷ್ಮೀ ದೇವಸ್ತಾನಕ್ಕೆ ಕಾಣಿಕೆ ರೂಪದಲ್ಲಿ ಬಂದಂತಹ ಚಿನ್ನ ಕೇವಲ 560 ಗ್ರಾಮ ಇರುವುದು ಭಕ್ತರ ಮನಸ್ಸಿಗೆ ಆಘಾತ ಉಂಟಾಗಿದೆ,
ಅರ್ಚಕರಾದ ರಾಜು ಪೂಜೇರಿ ಮತ್ತು ಕೆಂಪಣ್ಣಾ ಪೂಜೇರಿ ಇವರು ಕಾಣಿಕೆ ರೂಪದಲ್ಲಿ ಬಂದಂತಹ ಚಿನ್ನ,ಬೆಳ್ಳಿಯ ಆಭರಣವನ್ನು ತಮ್ಮ ಕುಟುಂಬಸ್ಥರಲ್ಲಿ ಇಟ್ಟುಕೊಂಡಿದ್ದಾರೆ ಅದರ ಜೊತೆಯಲ್ಲಿ 2019 ರಿಂದ 2023 ಹಬ್ಬ ಹರಿದಿನ ಜಾತ್ರೆಗಳಲ್ಲಿ ದೇವಿಗೆ ಶೃಂಗಾರ ಮಾಡಲು ಒಡವೆಗಳನ್ನು ನೀಡದೆ ಭಕ್ತರ ಮನಸ್ಸಿಗೆ ನೊವುಂಟು ಮಾಡಿದ್ದಾರೆಂದು ಭಕ್ತರು ಆರೋಪಿಸಿದ್ದಾರೆ.
ಶ್ರೀ ಲಕ್ಷ್ಮೀ ದೇವಸ್ಥಾನವು ದತ್ತಿ ಇಲಾಖೆಗೆ ಒಳಪಟ್ಟಿದ್ದರಿಂದ 5 ವರ್ಷಗಳಿಂದ ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನ,ಬೆಳ್ಳಿ ಹಾಗೂ ಹಣದ ಲೆಕ್ಕಾಚಾರವನ್ನು ಇಲಾಖೆಗೆ ನೀಡದೆ ಅರ್ಚಕರು ಸರಕಾರಕ್ಕೆ ವಂಚಿಸಿದ್ದಾರೆ.
ದಿನಾಂಕ 19/8/23 ರಂದು ಶ್ರೀ ಲಕ್ಷ್ಮಿ ದೇವಸ್ಥಾನದ ತಾಲೂಕಾಡಳಿತದ ಸಮ್ಮುಖದಲ್ಲಿ ನಡೆದ ಆಭರಣದ ಲೆಕ್ಕಾಚಾರದಲ್ಲಿ ಕೇವಲ 560 ಗ್ರಾಮ ಇರುವುದು ಕೇವಲ ನಾಯಕ ಸಮಾಜದವರಿಗೆ ಅಷ್ಟೇ ಅಲ್ಲದೆ ಸಾವಿರಾರು ಭಕ್ತ ಸಮೂಹಗಳ ಮನಸ್ಸಿಗೆ ಆಘಾತ ಉಂಟಾಗಿದ್ದು ತಹಸಿಲ್ದಾರ ಇವರು ಮತ್ತೊಮ್ಮೆ ಅರ್ಚಕರ ಕುಟುಂಬಸ್ಥರನ್ನು ತನಿಖೆಗೆ ಒಳಪಡಿಸಿ ತನಿಖೆ ಮುಗಿಯುವ ತನಕ ದೇವಸ್ಥಾನದ ಕೊಠಡಿಗಳನ್ನು ,ಅಲಮಾರಿಗಳ ಬೀಗದ ಕೈಗಳನ್ನು ನೀಡದಂತೆ ಒತ್ತಾಯಿಸಿದರು.
ಮನವಿ ಸ್ವಿಕರಿಸಿ ತಹಸಿಲ್ದಾರ ಕೆ.ಮಂಜುನಾಥ ಇವರು ಪಾರದರ್ಶಕವಾಗಿ ತನಿಖೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾದಕ್ಷ ವಿನೋದ ಕರನಿಂಗ,ಅದ್ಯಕ್ಷ ಯಶರಾಜ ಬೆಳಮರ್ಡಿ,ಉಪಾದಕ್ಷ ಯಲ್ಲಪ್ಪ ಕರನಿಂಗ,ಕಾರ್ಯದಕ್ಷ ರಮಾಕಾಂತ ಗುಡ್ಡಾಕಾಯು, ಸದಸ್ಯರಾದ ಅಶೋಕ ಗುಡ್ಡಾಕಾಯು,ಬಾಳೇಶ ಗುಡ್ಡಾಕಾಯು, ಸುನೀಲ ಕರನಿಂಗ, ಪರಸಪ್ಪ ಅರಬಗೋಳ,ಕುಮಾರ ಗುಡ್ಡಾಕಾಯು, ಈರಪ್ಪ ಪಟಗುಂದಿ,ಸೋಮಶೇಖರ ಹಟ್ಟಿ, ಬಸು ವಣ್ಣೂರಿ ಇನ್ನೂಳಿದ ಸದಸ್ಯರು ಹಾಗೂ ನಾಯಕ ಮುಖಂಡರು ಯುವಕರು ಉಪಸ್ಥಿತರಿದ್ದರು.