ಗೋಡಚಿನಮಲ್ಕಿ ಜಲಪಾತದ ಹತ್ತಿರ ಪೋಲಿಸ್ ಬೀಗಿ ಭದ್ರತೆ.
ಗೋಕಾಕ : ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗೋಡಚಿನಮಲ್ಕಿ ಫಾಲ್ಸ್ನಲ್ಲಿ ನೀರಿನ ಪ್ರಮಾಣ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನೀರು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಡಚಿನಮಲ್ಕಿ ಫಾಲ್ಸ್ ಬಳಿ ಬೆಳಗಾವಿ ಪೋಲಿಸ್ ವರಿಷ್ಟಾಧಿಕಾರಿ ಇವರ ಆದೇಶದಂತೆ ಗೋಕಾಕ ಡಿ,ವಾಯ್,ಎಸ್,ಪಿ,ಯವರ ಮಾರ್ಗದರ್ಶನದಲ್ಲಿ ಪಿ,ಎಸ್,ಐ, ಕಿರಣ ಮೊಹಿತೆ ಇವರ ನೇತೃತ್ವದಲ್ಲಿ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ಜಲಪಾತದ ಹತ್ತಿರ ಹೋಗದಂತೆ ಪೋಲಿಸ ಸಿಬ್ಬಂದಿಗಳನ್ನು ನಿಯೋಜಿಸಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ದೂರದಿಂದಲೇ ನಿಂತು ಫಾಲ್ಸ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಗೋಡಚಿನಮಲ್ಕಿ ಫಾಲ್ಸ್ ತುಂಬಿ ಹರಿಯುತ್ತಿದ್ದು ಹೀಗಾಗಿ ಜಲಪಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತಿದ್ದಾರೆ.ಇಲ್ಲಿ ಯುವಕರು ನೀರಿಗೆ ಇಳಿಯುವುದು, ನೀರು ಧುಮ್ಮಿಕ್ಕುವ ಜಾಗಕ್ಕೆ ಇಳಿದು ಬಂಡೆಗಲ್ಲಿನ ಮೇಲೆ ನಿಂತು ಸೆಳ್ಫಿ ಕ್ಲಿಕ್ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಅಲ್ಲದೆ ಇಲ್ಲಿ ಪ್ರವಾಸಿಗರ ಸುರಕ್ಷತೆಗೆ ಯಾವುದೇ ರೀತಿಯ ಅನುಕೂಲಗಳಿಲ್ಲ.ಹೀಗಾಗಿ ಗೋಕಾಕ್ ಡಿಎಸ್ಪಿ ಮಾರ್ಗದರ್ಶನದಲ್ಲಿ ಪಿ,ಎಸ್,ಐ, ಕಿರಣ ಮೊಹಿತೆ ಇವರ ನೇತೃತ್ವದಲ್ಲಿ ಗೋಡಚಿನಮಲ್ಕಿ ಜಲಪಾತಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಅಲ್ಲದೆ ಈ ಹಿಂದೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ವಿದ್ಯಾರ್ಥಿಗಳು ನೀರು ಪಾಲಾದಂತಹ ದುರ್ಘಟನೆಗಳು ಕೂಡ ಇಲ್ಲಿ ಸಂಭವಿಸಿವೆ. ಹೀಗಾಗಿ ಗೋಕಾಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಎ, ಎಸ್, ಐ, ಬಿ,ಎಸ್,ಬಡಿಗೇರ, ಎಚ್, ಸಿ, ಮಹಾಂತೇಶ ಮನ್ನಿಕೇರಿ, ,ಪೋಲಿಸ್ ಸಿಬ್ಬಂದಿಗಳಾದ ದುಂಡೇಶ ಅಂತರಗಟ್ಟಿ, ಸಂಜು ಮಳ್ಯಾಪ್ಪಗೋಳ, ಸಂತೋಷ ವಜ್ರಮಟ್ಟಿ, ಉಪಸ್ಥಿತರಿದ್ದರು.