ಪ್ರವಾಹದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ : ರಮೇಶ ಜಾರಕಿಹೋಳಿ
ಕೊವಿಡ್ ಸಮಯದಲ್ಲಿ ತಮ್ಮ ಜೀವದ ಹಂಗನ್ನು ಮರೆತು ಕೊರೊನಾ ಹರಡದಂತೆ ಶ್ರಮಿಸಿದ ಆಶಾ ಕಾರ್ಯಕರ್ತರ ಸೇವೆ ಗುರುತಿಸಿ ಮಾಜಿ ಸಚಿವ ರಮೇಶ ಜಾರಕಿಹೋಳಿ ಮತ್ತು ನೂತನ ಬೆಳಗಾವಿ ಲೊಕಸಭಾ ಸದಸ್ಯರಾದ ಮಂಗಲ ಅಂಗಡಿಯವರ ಪುತ್ರಿ, ಗೋಕಾಕದ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ದಿನಶಿ ಕಿಟ್ ವಿತರಿಸಿದರು,
ನಂತರ ಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಪ್ರವಾಹದ ಮುಂಜಾಗ್ರತಾ ಕ್ರಮಕ್ಕಾಗಿ ತಾಲೂಕಾ ಮಟ್ಟದ ಸಭೆ ಕರೆದು ಮುಂಗಾರು ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿರುವುದರಿಂದ ಪ್ರವಾಹದಿಂದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಿದರು, ಅದಲ್ಲದೆ ಮಳೆಗಾಲದಲ್ಲಿ ನಿರಾವರಿ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದರಿಂದ ಎಲ್ಲ ತಾಲೂಕಾ ಅಧಿಕಾರಿಗಳ ಜೊತೆ ದಿನಾಲು ಚರ್ಚಿಸಿ ಒಂದು ವೇಳೆ ಪ್ರವಾಹ ಬಂದಲ್ಲಿ ಜನರ ಜೊತೆ ಜಾನುವಾರಗಳನ್ನು ಸ್ಥಳಾಂತರ ಮಾಡಿ ಗಂಜಿ ಕೆಂದ್ರಗಳನ್ನು ತೆರೆದು ಅವರಿಗೆ ಬೇಕಾದ ವಸ್ತುಗಳನ್ನು ಪೊರೈಸಲು ತಹಸಿಲ್ದಾರರಿಗೆ ತಿಳಿಸಿದರು.ಅದಲ್ಲದೆ ಕೊರೊನಾ ಸಮಯದಲ್ಲಿ ಜನರ ಆರೋಗ್ಯದ ಕಡೆ ಗಮನ ಹರಿಸಲು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ, ಶಶಿಧರ ಬಗಲಿ, ಗೋಕಾಕ ತಹಸಿಲ್ದಾರ ಪ್ರಕಾಶ ಹೊಳೆಪ್ಪಗೋಳ,ಡಿ,ಎಸ್,ಪಿನಾಯಕ, ಸಿ,ಪಿ,ಆಯ್, ಗೋಪಾಲ ರಾಥೋಡ್, ಶ್ರೀಶೈಲ ಬ್ಯಾಕೂಡ,ನಗರ ಪಿ,ಎಸ್,ಐ, ವಾಲಿಕರ.ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆ, ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.