ರಾಯಬಾಗದಲ್ಲಿ ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ.
ರಾಯಬಾಗ : ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕೆಲ ಮರಾಠಿ ಪುಂಡರ ಹೆಡೆಮುರಿ ಕಟ್ಟಲು ಮತ್ತು ಎಮ,ಇ,ಎಸ್, ನಿಷೇದಿಸುವಂತೆ ಕರ್ನಾಟಕ ಬಂದ ಕರೆದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆ ವತಿಯಿಂದ ರಾಯಬಾಗ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಯಿತು.
ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕನ್ನಡ ಕಾರ್ಯಕರ್ತರು ಎಮ್ ಇ ಎಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಎಮ ಇ ಎಸ್ ನಿಷೇಧಿಸಲು ಆಗ್ರಹಿಸಿದರು. ಕೆಲ ಕಾಲ ರಸ್ತೆ ತಡೆದು ಕೊನೆಗೆ ರಾಯಬಾಗ ಝೆಂಢಾ ವೃತದಲ್ಲಿ ಎಲ್ಲರೂ ಸೇರಿ ಪೋಲಿಸ್ ಠಾಣೆಯ ಸಿ.ಪಿ.ಐ ಮಂಟೂರ್ ಹಾಗೂ ತಹಸೀಲ್ದಾರರ ಮುಂಜೆ ಇವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಶಿವರಾಮೇಗೌಡ
ಕರವೇ, ರಾಜ್ಯಾಧ್ಯಕ್ಷರು, ಕರ್ನಾಟಕ ಭೀಮ್ ರಕ್ಷಕ ಸಂಘಟನೆ ಹಾಗೂ ಕನ್ನಡಪರ ಹೋರಾಟಗಾರರಾದ ಈಶ್ವರ ಗುಡಜ, .ಅಣ್ಣಸಾಬ್ ತೆಲಸಂಗ ಕರವೇ ಜಿಲ್ಲಾ ಕಾರ್ಯದರ್ಶಿ ಬೆಳಗಾವಿ ಇರ್ಫಾನ್. ತಾಂಬೋಳಿ ರಾಯಬಾಗ ತಾಲೂಕ್ ಕರವೇ ಅಧ್ಯಕ್ಷರ ಮಹಾಂತೇಶ ದೊಡ್ಡಮನಿ ಕರವೇ ತಾಲೂಕ್ ಉಪಾಧ್ಯಕ್ಷ ರಾಯಬಾಗ .ಗಗನದೀಪ್, ಅವಳೆ ತಾಲೂಕಾ ಪ್ರಧಾನ ಕಾರ್ಯದರ್ಶಿ ರಾಯಬಾಗ ಮೋಸಿನ ಅತ್ತಾರ ಕರವೇ ರಾಯಬಾಗ ತಾಲೂಕ ಕಾರ್ಯದರ್ಶಿ ರಾಯಬಾಗ ಪತ್ರಕರ್ತರಾದ ಶಿವನಾಯಕ್. ಯಲ್ಲೂರ್ ಪ್ರವೀಣ ಪೂಜೇರಿ ಹಾಗು ಕನ್ನಡ ಪರ ಹೋರಾಟಗಾರರು ಹನುಮಂತ್, ದಾಸರ ಕರವೇ ಅಧ್ಯಕ್ಷರು ಮೇಖಳಿ ಗ್ರಾಮ ಪರಸ್. ಸಣ್ಣಕ್ಕಿ
ಕರವೇ ಉಪಾಧ್ಯಕ್ಷರು ಮೇಖಳಿ ಗ್ರಾಮೀಣ ಮುಸ್ತಫಾ, ಯಾದಗುಡೆ ಅಸ್ಲಮ್, ಪೆಂಡಾರಿ ಬಂದೇನವಾಜ್, ಶೇಕ್ ಶಭಿರ್, ಗೌಂಡಿ ನಿಯಾಜ್, ಸತಾರ ಉಪಸ್ಥಿತರಿದ್ದರು.