ಜಾಗರೂಕತೆಯಿಂದ ನಡೆದರೆ ರಸ್ತೆ ಮೇಲಿನ
ಅನಾಹುತಗಳನ್ನು ತಡೆಗಟ್ಟಬಹುದು : PSI ನಾಗರಾಜ ಖಿಲಾರೆ
ಗೋಕಾಕ : ಇತ್ತೀಚಿನ ದಿನಗಳಲ್ಲಿ ಯುವಜನತೆ
ವಾಹನಗಳನ್ನು ಚಲಾಯಿಸುವಾಗ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದರೆ ರಸ್ತೆ ಮೇಲೆ ಆಗುವ ಅನಾಹುತಗಳನ್ನು ತಡೆಗಟ್ಟಬಗಹುದೆಂದು ಗೋಕಾಕ ಗ್ರಾಮೀಣಠಾಣೆಯ ಪಿ.ಎಸ್.ಐ ನಾಗರಾಜ ಖಿಲಾರೆ ಹೇಳಿದರು.ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ಬೆಳಗಾವಿ ಪೋಲಿಸ್ ಇಲಾಖೆ ಮತ್ತು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಸಂಯೋಗದಲ್ಲಿ ಹಮ್ಮಿಕೊಂಡಂತಹ
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡಿದರು.
ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಗಳಿಗೆ
ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಂಡು,
ಕುಟುಂಬಸ್ಥರಿಗೆ ಕಷ್ಟ ಭಾರವಾಗುತ್ತಿದ್ದಾರೆ. ಜೊತೆಗೆ ಮದ್ಯಪಾನ ಸೇವಿಸಿ ಹಾಗೂ ವಾಹನ ಕಂಟ್ರೋಲ್ ಆಗದರೀತಿ ವಾಹನ ಚಲಾವಣೆ ಮಾಡುವುದರಿಂದ ಹೆಚ್ಚಿನ ರಸ್ತೆ ಅಪಘಾತಗಳು ಆಗುತ್ತಿವೆ. ಆದಷ್ಟೂ ಇಂತಹ ಚಟುವಟಿಕೆಗಳಿಂದ ಆದಷ್ಟೂ ದೂರವಿರಬೇಕೆಂದು ಕರೆ ನೀಡಿದರು. ಈಸಂಧರ್ಭದಲ್ಲಿ ಖನಗಾಂವ ಗ್ರಾಮದ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.