ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂಗೆ ಅಭಿನಂದನೆ ಸಲ್ಲಿಸಿದ ಕನ್ನಡಪರ ಸಂಘಟನೆ ಮುಖಂಡ
ಘಟಪ್ರಭಾ : ಕರ್ನಾಟಕದ ಅಸ್ತಿತ್ವಕ್ಕೆ ದಕ್ಕೆ ಉಂಟಾದಾಗ ಬೀದಿಗೆ ಇಳಿದು ಹೋರಾಟ ಮಾಡುವರು ಕನ್ನಡ ಪರ ಸಂಘಟನೆಗಳು ಮೊದಲಿಗರು.ಸ್ವಾಭಿಮಾನಿ ಕನ್ನಡಿಗರು ಸೇರಿ ಕನ್ನಡ ನಾಡು ನುಡಿ, ನೆಲ ಜಲ, ಸಂಸ್ಕೃತಿ, ಹೆಣ್ಣು ಮಕ್ಕಳ ರಕ್ಷಣೆ,ರೈತ ಕಾರ್ಮಿಕರ ರಕ್ಷಣೆ ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಲುವಾಗಿ ಸಾಕಷ್ಟು ಹೋರಾಟಗಳು ಪ್ರತಿಭಟನೆಗಳು ಕನ್ನಡ ಪರ ಸಂಘಟನೆಗಳು ಮಾಡಿಕೊಂಡು ಬಂದಿವೆ.
ಈ ಒಂದು ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಅನೇಕ ಕನ್ನಡ ಪರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಮೇಲೆ ಕೇಸ್ ದಾಖಲಾಗಿವೆ. ಆ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ವಿವಿಧಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ ಹಿನ್ನೆಲೆಯಲ್ಲಿ ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಕನ್ನಡಪರ ಸಂಘಟನೆಗಳಲ್ಲಿ ಅದರಲ್ಲೂ ಬೆಳಗಾವಿಯಂತಹ ಗಡಿಭಾಗದಲ್ಲಿ ನಾಡು- ನುಡಿ, ನೆಲ-ಜಲ, ಭಾಷೆ ಸಂಸ್ಕೃತಿ ಹೋರಾಟಗಳಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿಗೆ ಅನನ್ಯ ಕೊಡುಗೆ ನೀಡಿದ್ದಾರೆ, ಆದರೆ ಅಂಥವರ ಮೇಲೆ ದುರುದ್ದೇಶದಿಂದ ಕೂಡಿದ ಎಲ್ಲಾ ಕೇಸ್ ಗಳನ್ನು ಹಿಂತೆಗೆದುಕೊಂಡು ಅವರ ಹಿತ ಕಾಪಾಡಬೇಕು, ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ಈ ನಿರ್ಧಾರ ತೆಗೆದುಕೊಂಡ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕನ್ನಡಪರ ಹೋರಾಟಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಆದಷ್ಟು ಬೇಗ ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿದಂತೆ ಬರೀ ಅಶ್ವಾಸನೆಗೆ ಸೀಮಿತವಾಗದೇ ಕಾರ್ಯ ರೂಪಕ್ಕೆ ತಂದರೆ ಕನ್ನಡಪರ ಹೋರಾಟಗಾರರಿಗೆ ತುಂಬಾ ಸಂತೋಷವಾಗಲಿದೆ.