ಕಾರ್ಮಿಕ ದುರಿಣ ಅಂಬಿರಾವ ಪಾಟೀಲರಿಂದ ಲಸಿಕಾ ಮೇಳಕ್ಕೆ ಚಾಲನೆ,
ಗೋಕಾಕ ತಾಲೂಕಿನಲ್ಲಿ “ಲಸಿಕಾ ಮೇಳ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ ತಾಲೂಕಿನಲ್ಲಿ ಒಟ್ಟು 53 ತಂಡಗಳನ್ನು ರಚಿಸಲಾಗಿದೆ. ನಿರಂತರವಾಗಿ ಪ್ರತಿ ದಿನ ಮೇಳಗಳನ್ನು ಆಯೋಜಿಸಿ ತಾಲೂಕಿನ ಎಲ್ಲ ಗ್ರಾಮಗಳ ಜನರಿಗೆ ಲಸಿಕೆ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳಿಗೆ ಹಾಗು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಲಾಗುವುದು. ಟೋಕನ್ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು Covid ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಸಾಲಾಗಿ ಬಂದು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಎಂದರು.
ಈ ಮೇಳದಲ್ಲಿ ತಾಲೂಕು ವೈದ್ಯಾಧಿಕಾರಿ ಮುತ್ತಣ ಕೊಪ್ಪದ, ರವೀಂದ್ರ ಅಂಟಿನ, ಪೌರಾಯುತ್ತರಾದ ಶಿವಾನಂದ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ ಎಂ ಎಚ್ ಗಜಾಕೋಸ.ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ,ಹಾಗೂ ನಗರ ಸಭೆ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.