Breaking News

ಗೋಕಾಕ ಮತ್ತು ಚಿಕ್ಕೋಡಿ ಎರಡರಲ್ಲಿ ಯಾವುದಕ್ಕೆ ಜಿಲ್ಲೆ ಆಗುವ ಬಾಗ್ಯ,ಹೇಗೆ ,???

Spread the love

ಗೋಕಾಕ ಮತ್ತು ಚಿಕ್ಕೋಡಿ ಎರಡರಲ್ಲಿ ಯಾವುದಕ್ಕೆ ಜಿಲ್ಲೆ ಆಗುವ ಬಾಗ್ಯ,ಹೇಗೆ ,??

ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಅತ್ಯಂತ ಅವಶ್ಯಕವಾಗಿದ್ದು, ಚಿಕ್ಕೋಡಿ ಅಥವಾ ಗೋಕಾಕ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕ ಜಿಲ್ಲೆಯನ್ನು ಮಾಡಬಹುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿಯವರಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಮನವಿ ಸ್ವೀಕರಿಸಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆಯನ್ನು ಮಾಡಿ ಚಿಕ್ಕೋಡಿ ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಚಿಕ್ಕೋಡಿ ಗೋಕಾಕ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಿದರು. ತಾಂತ್ರಿಕ ಕಾರಣದಿಂದ ಕೈಬಿಡಲಾಯಿತು. ಚಿಕ್ಕೋಡಿ ಗೋಕಾಕ ಪ್ರತ್ಯೆಕ ಜೀಲ್ಲೆಯ ಇವತ್ತು ಸಿ ಎಂ ಬಿ ಎಸ್ ಯಡಿಯೂರಪ್ಪನವರ ಮನವಿಯನ್ನು ಮಾಡುವೆ….ಹಾಗೂ ಚಿಕ್ಕೋಡಿ ಗೋಕಾಕ ತಾಲೂಕಿನಲ್ಲಿ ಯಾರಾದರೂ ಒಬ್ಬರು ಹಿಂದೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕವನ್ನು ಸಲೀಸಾಗಿ ಜಿಲ್ಲೆ ಮಾಡಬಹುದು ಎಂದು ಸಚಿವ ರಮೇಶ್ ಜಾರಕಿಹೋಳಿ ಸ್ಪಷ್ಟ ಪಡಿಸಿದ್ದಾರೆ..

ಈ ಸಂದರ್ಭದಲ್ಲಿ ಬಿ ಆರ್ ಸಂಗಪ್ಪಗೋಳ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Spread the love

About Fast9 News

Check Also

ಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ

Spread the loveಶಾಸಕ ಬಾಲಚಂದ್ರ ಜಾರಕಿಹೋಳಿ ಇವರಿಂದ  ಡ್ರಟ್ಟಿ ಗ್ರಾಮದಲ್ಲಿ  ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಗೋಕಾಕ- ಅಂಗನವಾಡಿ ಕಟ್ಟಡ …

Leave a Reply

Your email address will not be published. Required fields are marked *